ಶೋಪಿಯಾನ್: ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಸೇನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಹಸ್ಯವಾಗಿ ಭೂಗತ ಬಂಕರ್ಗಳ ಮೊರೆ ಹೋಗಿದ್ದಾರೆ.

ಈ ಹಿಂದೆ ಸ್ಥಳೀಯರ ನಿವಾಸಗಳಲ್ಲಿ ಅಡಗಿಕೊಳ್ಳುತ್ತಿದ್ದ ಉಗ್ರರು, ಈಚೆಗೆ ದಟ್ಟವಾದ ತೋಟಗಳು ಇಲ್ಲವೇ ಸಣ್ಣಹೊಳೆಗಳ ಬಳಿ ಭೂಗತ ಬಂಕರ್ ನಿರ್ಮಿಸಿಕೊಂಡು ಸೇನೆ ಮತ್ತು ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವ ಮಾರ್ಗ ಹುಡುಕಿಕೊಂಡಿದ್ದಾರೆ.

‘ಉಗ್ರರ ಈ ಹೊಸ ಟ್ರೆಂಡ್ ಬರೀ ಶೋಪಿಯಾನ್ಗೆ ಮಾತ್ರ ಸೀಮಿತವಾಗಿಲ್ಲ. ಪುಲ್ವಾಮಾ ಜಿಲ್ಲೆಯ ಸೇಬಿನ ತೋಟಗಳು, ದಟ್ಟಕಾಡುಗಳಲ್ಲೂ ಇಂಥ ಬಂಕರ್ಗಳಿವೆ’ ಎನ್ನುತ್ತಾರೆ 44 ರಾಷ್ಟ್ರೀಯ ರೈಫಲ್ಸ್ ಮುಖ್ಯಸ್ಥ ಕರ್ನಲ್ ಎ.ಕೆ.ಸಿಂಗ್.

‘ರಹಸ್ಯ ಬಂಕರ್ಗಳಲ್ಲಿ ಅಡಗಿರುವ ಉಗ್ರರನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಲ್ಲ. ಅಲ್ಲಿ ಉಗ್ರರು ಬಹಳ ದಿನಗಳವರೆಗೆ ಸುರಕ್ಷಿತವಾಗಿ ಅಡಗಿರುವ ಸಾಧ್ಯತೆಯೂ ಇದೆ’ ಎನ್ನುತ್ತಾರೆ ಅವರು.

ಸಿಂಗ್ ನೇತೃತ್ವದ ತಂಡ ಈಗಾಗಲೇ 47 ಉಗ್ರರ ಕಾರ್ಯಾಚರಣೆಯನ್ನು ತಟಸ್ಥಗೊಳಿಸಿದೆ. ಏಳು ಉಗ್ರರು ಶರಣಾಗತಿ ಹೊಂದಿದ್ದಾರೆ.

ಹೊಳೆ ಮಧ್ಯದಲ್ಲೂ ಬಂಕರ್!: ಕೆಲ ಉಗ್ರರು ಮಳೆಗಾಲದಲ್ಲಿ ಮಾತ್ರ ಹರಿಯುವ ಹೊಳೆಯ ಮಧ್ಯದಲ್ಲೂ ಬಂಕರ್ ನಿರ್ಮಿಸಿಕೊಂಡಿದ್ದಾರೆ. ಅನುಮಾನದ ಮೇರೆಗೆ ರಾಂಬಿ ಅರಾ ಪ್ರದೇಶವನ್ನು ಪರಿಶೀಲಿಸಿದಾಗ ಅಲ್ಲಿ ಬಂಕರ್ಗಳಿರುವುದು ಪತ್ತೆಯಾಗಿದೆ.

‘ಕಬ್ಬಿಣದ ಬ್ಯಾರೆಲ್ಗಳನ್ನು ಬಳಸಿ ನಿರ್ಮಿಸಿರುವ ಈ ಬಂಕರ್ಗಳಲ್ಲಿದ್ದ ಉಗ್ರರು ಹೊಳೆಯ ಮಧ್ಯಭಾಗದಲ್ಲೇ ಹೊರಬರುವುದನ್ನು ಕಂಡಿದ್ದೇವೆ. ಸಾಮಾನ್ಯವಾಗಿ ಈ ಹೊಳೆಗಳು ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ. ಉಳಿದ ದಿನಗಳಲ್ಲಿ ನೀರಿನ ಮಟ್ಟ ಕಮ್ಮಿ ಇರುತ್ತದೆ’ ಎಂದೂ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.