ಷಹಜಹಾನ್ಪುರ: ‘ಮಾನವ ಕಳ್ಳಸಾಗಾಣೆಯಲ್ಲಿ ತೊಡಗಿದ್ದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇವರ ವಶದಲ್ಲಿದ್ದ ಮೂವರು ಬಾಲಕಿಯರನ್ನು ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸುರೇಶ್ ಕುಮಾರ್ ಎಂಬುವರ ಮನೆ ಮೇಲೆ ದಾಳಿ ನಡೆಸಿ ಮೂವರು ಬಾಲಕಿಯರನ್ನು ಬಿಡುಗಡೆಗೊಳಿಸಲಾಯಿತು. ಇಬ್ಬರು ಬಾಲಕಿಯರು ಅಪ್ರಾಪ್ತ ವಯಸ್ಸಿನವರು. ಗಲಾಟೆ ಮಾಡಿಕೊಂಡು ಬಂದಿದ್ದ ಬಾಲಕಿಯರು ಬರಾಬಂಕಿ, ಲಖೀಂಪುರ್ ಖೇರಿ ಹಾಗೂ ಸೋನ್‌ಭದ್ರಾ ಜಿಲ್ಲೆಯವರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್‌ಚಂದ್ರ ಶಾಕ್ಯ ತಿಳಿಸಿದರು.

‘ಗ್ಯಾಂಗ್‌ನ ಸದಸ್ಯರು ಒಬ್ಬಳನ್ನು ಈಗಾಗಲೇ ಜಹಾನಾಬಾದ್‌ನ ವ್ಯಕ್ತಿಯೊಬ್ಬರಿಗೆ ಮಾರಿದ್ದು, ಇನ್ನುಳಿದವರ ಮಾರಾಟಕ್ಕೂ ಯತ್ನಿಸುತ್ತಿದ್ದರು. ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.