ಶಹಜಾನ್‌ಪುರ: ಉತ್ತರ ಪ್ರದೇಶದಶಹಜಾನ್‌ಪುರದ ತಿಹಾರ್ ವಿಧಾನಸಭಾ ಕ್ಷೇತ್ರವು 'ಮಾವ Vs ಸೊಸೆ' ಸ್ಪರ್ಧೆಗೆ ಸುದ್ದಿಯಾಗಿದೆ. ಶಾಸಕ ರೋಷನ್‌ಲಾಲ್ ವರ್ಮಾ ಅವರ ಸೊಸೆ ಎಂದು ಹಕ್ಕೊತ್ತಾಯ ಮಾಡುತ್ತಿರುವ ಮಹಿಳೆ ಅದೇ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

33 ವರ್ಷದ ಸರಿತಾ ಯಾದವ್ ಅವರು ರಾಷ್ಟ್ರೀಯ ಸಮಾಜ್ ಪಾರ್ಟಿಯ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ರೋಷನ್‌ಲಾಲ್ ವರ್ಮಾ ಬಿಜೆಪಿ ಶಾಸಕನಾಗಿ ಮುಸ್ಲಿಮರು ಮತ್ತು ಯಾದವರ ಮೇಲೆ ಶೋಷಣೆ ನಡೆಸಿದ್ದಾರೆ ಎಂದು ಸರಿತಾ ಆರೋಪಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರೋಷನ್‌ಲಾಲ್ ಅವರು ತಿಹಾರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಂತರ ಬಿಜೆಪಿ ತೊರೆದು ಸಮಜವಾದಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಈ ಬಾರಿ ಅದೇ ಪಕ್ಷದಿಂದ ತಿಹಾರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ತಿಹಾರ್ ಕ್ಷೇತ್ರದಲ್ಲಿ ಭಾರಿ ಬೆಂಬಲ ಸಿಗುತ್ತಿರುವುದಾಗಿ ಹೇಳಿದ ಸರಿತಾ ಯಾದವ್ ಅವರು ವರ್ಮಾ ಅವರಿಂದ ಶೋಷಣೆಗೆ ಒಳಗಾದ ಮಂದಿಗೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಬಿ.ಎಸ್.ಯಡಿಯೂರಪ್ಪ ಮೊಮ್ಮಗಳ ಸಾವು: ಆತ್ಮಹತ್ಯೆ ಶಂಕೆ

ಸರಿತಾ ಯಾದವ್ ಅವರು ತಮ್ಮನ್ನು ಅವರ ಸೊಸೆ ಎಂದು ಹೇಳಿಕೊಂಡಿರುವ ಬಗ್ಗೆ ಪ್ರತಿಯಿಸಿದ ವರ್ಮಾ, 'ತನ್ನ ಸೊಸೆ ಎಂದು ಹೇಳಿಕೊಳ್ಳುತ್ತಿರುವ ಮಹಿಳೆಗೆ ಮದುವೆಯಾಗಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಕುಟುಂಬಕ್ಕೂ ಗೊತ್ತಿಲ್ಲ. ನನ್ನ ಹೆಸರನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ. ನನ್ನ ವಿರುದ್ಧ ಚುನಾವಣೆಗೆ ನಿಂತಿದ್ದಾರೆ. ಇದರಿಂದ ನನ್ನ ವರ್ಚಸ್ಸಿಗೆ ಯಾವುದೇ ತೊಂದರೆಯಾಗುವುದಿಲ್ಲ' ಎಂದು ವರ್ಮಾ ಪ್ರತಿಕ್ರಿಯಿಸಿದರು.

ವರ್ಮಾ ಅವರ ಮಗ ವಿನೋದ್ 2019ರಲ್ಲಿ ಮೃತಪಟ್ಟಿದ್ದಾರೆ. ಸರಿತಾ ಯಾದವ್ ಅವರು ವಿನೋದ್ ಅವರ ಪತ್ನಿ ಎಂದು ವಾದಿಸುತ್ತಿದ್ದಾರೆ. ಸರಿತಾ ಅವರು 2012ಕ್ಕೂ ಮೊದಲು ಶಾಸಕ ಮತ್ತು ಅವರ ಮಗನ ವಿರುದ್ಧ ಅತ್ಯಾಚಾರಗಳಂತಹ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. 2020ರಲ್ಲಿ ಶಾಸಕರ ವಿರುದ್ಧ ಮತ್ತು ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಧರಣಿ ಕುಳಿತಿದ್ದರು. ಈ ಆರೋಪಗಳನ್ನು ಶಾಸಕ ವರ್ಮಾ ನಿರಾಕರಿಸಿದ್ದರು.

ಜೆಡಿಎಸ್ ಶಾಸಕ ಪುಟ್ಟರಾಜು–ಸಿದ್ದರಾಮಯ್ಯ ಭೇಟಿ: ರಾಜಕೀಯ ವಲಯದಲ್ಲಿ ಚರ್ಚೆ

ಮಹಿಳೆ ಪರ ವಕೀಲ ಅಧ್ವೇಶ್ ಸಿಂಗ್, 'ಸರಿತಾ ಅವರು ಶಾಸಕರ ಮೃತ ಮಗನ ಎರಡನೇ ಹೆಂಡತಿ. ಮೊದಲ ಪತ್ನಿ ಶಾಸಕರ ಹುಟ್ಟೂರಿನಲ್ಲಿ ನೆಲೆಸಿದ್ದಾರೆ' ಎಂದು ತಿಳಿಸಿದ್ದಾರೆ.

ಮಗ ಮೃತಪಟ್ಟ ಬಳಿಕ ಅವರ ಮನೆಯಿಂದ ತನ್ನನ್ನು ಹೊರಗಟ್ಟಲಾಗಿದೆ ಎಂದು ಸರಿತಾ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.