ನವದೆಹಲಿ: ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಎಬಿವಿಪಿಯ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ) ಅಂಕಿವ್ ಬಸೋಯ್ ನಕಲಿ ದಾಖಲೆಗಳನ್ನು ನೀಡಿ ಪ್ರವೇಶಾತಿ ಪಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಬೆಂಬಲಿತ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ಆರೋಪಿಸಿದೆ.

ಆದಾಗ್ಯೂ,ಅಂಕಿವ್ ಬಸೋಯ್ ಅವರ ದಾಖಲಾತಿ ಪತ್ರಗಳನ್ನು ಪರಿಶೀಲನೆ ಮಾಡಿಯೇ ದೆಹಲಿ ವಿವಿ ಪ್ರವೇಶಾತಿ ನೀಡಿದೆ ಎಂದು ಎಬಿವಿಪಿ ತಿಳಿಸಿದೆ.

ಎನ್ಎಸ್ಯುಐ ಪತ್ರವೊಂದನ್ನು ಬಿಡುಗಡೆ ಮಾಡಿದ್ದು ಅಂಕಿವ್ ಬಸೋಯ್ ಅವರು ತಿರುವಲ್ಲೂವರ್ ವಿಶ್ವವಿದ್ಯಾಲಯದ ನಕಲಿ ಪದವಿ ಪತ್ರ ನೀಡಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದಾರೆ ಎಂದು ಆರೋಪಿಸಿದೆ.

ಅಂಕಿವ್ ಬಸೋಯ್ ಅವರು ಸ್ನಾತಕೋತ್ತರ ಪದವಿಯಲ್ಲಿ ಬೌಧ್ಧ ಅಧ್ಯಯನಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಬಗ್ಗೆ ಎನ್ಎಸ್ಯುಐತಿರುವಲ್ಲೂವರ್ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಬಸೋಯ್ ಅವರ ನೋಂದಣಿ ಸಂಖ್ಯೆ ನೀಡಿ ಅವರ ಅಂಕಪಟ್ಟಿಯನ್ನು ಪರಿಶೀಲಿಸುವಂತೆ ಮನವಿ ಮಾಡಿತ್ತು. ಆದರೆ ಅಂಕಿವ್ ಬಸೋಯ್ ಹೆಸರು ಮತ್ತು ಅವರ ಅಂಕಪಟ್ಟಿಯ ನೋಂದಣಿ ಸಂಖ್ಯೆ ವಿಶ್ವವಿದ್ಯಾಲಯದ ದಾಖಲೆಗಳಲ್ಲಿ ಇಲ್ಲ ಎಂದು ವಿಶ್ವವಿದ್ಯಾಲಯ ತಿಳಿಸಿದೆ ಎಂದು ಎನ್ಎಸ್ಯುಐ ಹೇಳಿದೆ.

ದೆಹಲಿ ವಿವಿ ಅಂಕಿವ್ ಬಸೋಯ್ ಅವರ ದಾಖಲಾತಿ ಪತ್ರಗಳನ್ನು ಪರಿಶೀಲಿಸಿ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡಿದೆ. ಈಗಲೂ ಎಲ್ಲಾ ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ದಾಖಲಾತಿ ಪ್ರಮಾಣ ಪತ್ರಗಳನ್ನು ಪರಿಶೀಲಿಸುವ ಹಕ್ಕನ್ನುದೆಹಲಿ ವಿವಿ ಹೊಂದಿದೆ. ವಿವಿಯ ಯಾವುದೇ ವಿದ್ಯಾರ್ಥಿಯ ದಾಖಲೆಗಳನ್ನು ಪರಿಶೀಲಿಸುವುದು ಎನ್ಎಸ್ಯುಐ ಕೆಲಸವಲ್ಲ ಎಂದು ಎಬಿವಿಪಿ ತಿರುಗೇಟು ನೀಡಿದೆ.

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ಕಳೆದ ವಾರ ನಡೆದ ಚುನಾವಣೆಯಲ್ಲಿ ಎಬಿವಿಪಿ ಭರ್ಜರಿ ಜಯಗಳಿಸಿದ್ದು, ಅಧ್ಯಕ್ಷ ಸ್ಥಾನ ಸೇರಿದಂತೆ, ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳನ್ನು ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.