ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಬಹುತೇಕ ಶಾಸಕರು ಸೇರಿದ್ದರೂ, ಉದ್ಧವ್ ಠಾಕ್ರೆ ಅವರು ಶಿವಸೇನಾದ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ ಎಂದು ಸಂಸದ ಅರವಿಂದ್ ಸಾವಂತ್ ಗುರುವಾರ ಹೇಳಿದ್ದಾರೆ.

‘ರಾಜಕೀಯ ಪಕ್ಷವಾಗಿ ಶಿವಸೇನಾ ಮತ್ತು ಸೇನಾ ಶಾಸಕಾಂಗ ಪಕ್ಷವು ಎರಡು ವಿಭಿನ್ನ ಘಟಕಗಳು. ಬಂಡಾಯ ಶಾಸಕರ ಗುಂಪಿಗೆ ಮಾನ್ಯತೆ ಇಲ್ಲ. ಮೂರನೇ ಎರಡು ಭಾಗದಷ್ಟು ಶಾಸಕರು ಮತ್ತೊಂದು ಬಣಕ್ಕೆ ಹೋದರೂ, ಉದ್ಧವ್ ಠಾಕ್ರೆ ಶಿವಸೇನಾ ಮುಖ್ಯಸ್ಥರಾಗಿ ಉಳಿಯುತ್ತಾರೆ. ಕಾನೂನಿನ ಪ್ರಕಾರ, ಶಾಸಕಾಂಗ ಪಕ್ಷದ ನಾಯಕರನ್ನು ಅವರು ಮಾತ್ರ ನೇಮಿಸಬಹುದು’ ಎಂದು ಸಾವಂತ್ ವೆಬ್ ಪೋರ್ಟಲ್ಗೆ ತಿಳಿಸಿದ್ದಾರೆ.

‘ಬಂಡಾಯ ಶಾಸಕರು ತಮ್ಮ ಗುಂಪನ್ನು ತಕ್ಷಣವೇ ಬೇರೆ ಪಕ್ಷದೊಂದಿಗೆ ವಿಲೀನಗೊಳಿಸಬೇಕು. ಆದರೆ ಅವರು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳಿಸಿಲ್ಲ. ಆದ್ದರಿಂದ ಅವರಿಗೆ ಯಾವುದೇ ಮಾನ್ಯತೆ ಇಲ್ಲ’ ಎಂದರು.

‘ಠಾಕ್ರೆ ಮತ್ತು ಶಿವಸೇನಾವನ್ನು ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಸಾವಂತ್ ಪ್ರತಿಪಾದಿಸಿದ್ದಾರೆ. ಆದರೆ ‘ ಶಿಂಧೆ ನೇತೃತ್ವದ ಬಣವೇ ಪಕ್ಷದ ನಿಜವಾದ ಹಕ್ಕುದಾರ ಎಂದು ಶಿವಸೇನಾ ಬಂಡಾಯ ಶಾಸಕ ಗುಲಾಬ್ರಾವ್ ಪಾಟೀಲ್’ ಬುಧವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.