ನವದೆಹಲಿ (ಪಿಟಿಐ): ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿ ಸೇರ್ಪಡೆಗೆ ಬಾಕ್ಸರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿಜೇಂದರ್ ಸಿಂಗ್ ಅವರು ಸಿನಿಮಾ ಡೈಲಾಗ್‌ನಿಂದಲೇ ‘ಪಂಚ್’ ಕೊಟ್ಟಿದ್ದಾರೆ.

‘ಬಿಜೆಪಿಯವರ ಬಳಿ ‘ಡಾಯ್ ಕಿಲೋ ಕ ಹಾಥ್’ ಇದ್ದರೆ (ಎರಡೂವರೆ ಕೆಜಿ ತೂಕದ ಕೈಗಳು), ಕಾಂಗ್ರೆಸ್‌ನವರ ಬಳಿ ‘ಶಕ್ತಿಶಾಲಿ ಬೈಸೆಪ್ಸ್’ (ರಟ್ಟೆ ಸ್ನಾಯು)ಇದ್ದು, ಪಂಚ್ ನೀಡಲುಸಮರ್ಥವಾಗಿವೆ’ ಎಂದು ವಿಜೇಂದರ್ ಹೋಲಿಕೆ ನೀಡಿದ್ದಾರೆ.

ದಕ್ಷಿಣ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ತಮ್ಮ ಬಾಕ್ಸಿಂಗ್ ವೃತ್ತಿಯು ಹೇಗೆ ಹೋರಾಡಬೇಕು ಎಂಬುದನ್ನು ಹೇಳಿಕೊಟ್ಟಿದೆ. ಹೀಗಾಗಿ ರಾಜಕೀಯದಲ್ಲೂ ಹೋರಾಡಿ ಜಯ ಗಳಿಸುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

1993ರಲ್ಲಿ ತೆರೆಕಂಡ ಸನ್ನಿ ಡಿಯೋಲ್ ಅವರ ನಟನೆಯ ದಾಮಿನಿ ಚಿತ್ರದಲ್ಲಿ ‘ಡಾಯ್ ಕಿಲೋ ಕ ಹಾಥ್’ ಎಂಬ ಡೈಲಾಗ್ ಜನಪ್ರಿಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.