ರಾಜ್‌ಕೋಟ್ (ಗುಜರಾತ್): ರಾಜ್‌ಕೋಟ್‌ನ ಗರ್ಬಾ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರು ಅರವಿಂದ ಕೇಜ್ರಿವಾಲ್ ಅವರ ಮೇಲೆ ನೀರಿನ ಪ್ಲ್ಯಾಸ್ಟಿಕ್ ಬಾಟಲಿಯನ್ನು ಎಸೆದಿದ್ದಾರೆ. ಗರ್ಬಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರಿಗೆ ಕೇಜ್ರಿವಾಲ್ ಅವರು ಕೈಬೀಸುತ್ತಿದ್ದ ವೇಳೆ ಬಾಟಲಿಯನ್ನು ಎಸೆಯಲಾಗಿದೆ. ಕೇಜ್ರಿವಾಲ್ ಅವರ ಸುತ್ತ ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ನಾಯಕರು ಇದ್ದರು.

‘ಬಾಟಲಿಯನ್ನು ದೂರದಿಂದ ಎಸೆಯಲಾಗಿದೆ. ಅದು ಕೇಜ್ರಿವಾಲ್ ಅವರ ತಲೆ ಮೇಲಿಂದ ಹಾರಿ ಬಿದ್ದಿತು. ಕೇಜ್ರಿವಾಲ್ ಅವರ ಮೇಲೆಯೇ ಬಾಟಲಿಯನ್ನು ಎಸೆಯಲಾಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ, ಇದನ್ನು ಪುಷ್ಟೀಕರಿಸಲು ನಮ್ಮ ಬಳಿ ಯಾವುದೇ ಸಾಕ್ಷ್ಯ ಇಲ್ಲ. ಆದ್ದರಿಂದ ಪೊಲೀಸರಿಗೆ ದೂರು ನೀಡಲಿಲ್ಲ’ ಎಂದು ಎಎಪಿಯ ಮಾಧ್ಯಮ ಸಂಯೋಜಕ ಸುಖನ್‌ರಾಜ್ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.