ಥಾಣೆ: ಆನ್‌ಲೈನ್ ಮೂಲಕ ಬಿಟ್ ಕಾಯಿನ್‌ಗೆ ಹಣ ಹೂಡುವಂತೆ ಆಮಿಷ ಒಡ್ಡಿದ ವಂಚಕರ ಜಾಲಕ್ಕೆ ಸಿಲುಕಿ ಮಹಾರಾಷ್ಟ್ರದ ಮಹಿಳೆಯೊಬ್ಬರು ₹26.88 ಲಕ್ಷ ಕಳೆದುಕೊಂಡಿದ್ದಾರೆ.

ವಂಚನೆಗೊಳಗಾದ 33 ವರ್ಷದ ಮಹಿಳೆ ದೂರು ನೀಡಿದ್ದು, ಕಪೂರ್‌ಬಾವ್ಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಬಿಟ್‌ಕಾಯಿನ್ ಕುರಿತು ಪ್ರಕಟವಾಗಿದ್ದ ಜಾಹೀರಾತು ಒಂದರಲ್ಲಿ ಇದ್ದ ಫೋನ್ ಸಂಖ್ಯೆಗೆ ಕರೆ ಮಾಡಿದ ಮಹಿಳೆ, ಅವರ ಸಲಹೆಯಂತೆ ಕಳೆದ ಒಂದು ವರ್ಷದಲ್ಲಿ ₹26.88 ಲಕ್ಷ ಪಾವತಿಸಿದ್ದಾರೆ. ಆನ್‌ಲೈನ್‌ನಲ್ಲಿ ಇವರಿಗಾಗಿಯೇ ಪ್ರತ್ಯೇಕ ಲಾಗಿನ್ ನೀಡಲಾಗಿತ್ತು. ಹೂಡಿಕೆಯಿಂದ ಬಂದ ಹಣವನ್ನು ಮರಳಿ ಪಡೆಯಲು ಇದರಲ್ಲಿ ಅವಕಾಶ ಇರುವುದಾಗಿ ಹೇಳಿದ್ದರು ಎಂದು ದೂರಿನಲ್ಲಿ ಮಹಿಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಆದರೆ ಈ ಲಾಗಿನ್ ಬಳಸಿ ಹಣ ಪಡೆಯಲು ಪ್ರಯತ್ನಿಸಿದರೆ ಅಲ್ಲಿ ಸಮಸ್ಯೆ ಎದುರಾಯಿತು. ಯಾವುದೇ ಹಣ ನನಗೆ ಸಿಗಲಿಲ್ಲ’ ಎಂದಿದ್ದಾರೆ.

ಈ ಕುರಿತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.