ತಿರುವನಂತಪುರ: ಶಬರಿಮಲೆ ಅಯ್ಯಪ್ಪನನ್ನು ದರ್ಶನ ಮಾಡಿದ್ದ ಕನಕದುರ್ಗ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಭದ್ರತೆಯ ಕಾರಣಕ್ಕೆ ಕೆಲ ಕಾಲ ಅಜ್ಞಾತ ಸ್ಥಳದಲ್ಲಿದ್ದ ಅವರು ಸೋಮವಾರವಷ್ಟೇ ಮನೆಗೆ ಹಿಂದಿರುಗಿದ್ದರು. ಈ ವೇಳೆ ಸಂಬಂಧಿಕರು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಅಸ್ವಸ್ಥರಾದರು.

ಮಲಪುರಂ ಜಲ್ಲೆಯ ಪೆರಿಂಥಲಮನ್ನಾ ಪಟ್ಟಣದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ವರದಿ ಮಾಡಿದೆ. ‘ಕನಕದುರ್ಗ ಮೇಲೆ ಆಕೆಯ ಅತ್ತೆ ಹಲ್ಲೆ ಮಾಡಿದ್ದಾರೆ’ ಎಂದು ‘ಎನ್‌ಡಿಟಿವಿ’ ವರದಿ ತಿಳಿಸಿದೆ.

ಜ.2ರಂದು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿದ ಕನಕದುರ್ಗ ದೇಶವ್ಯಾಪಿ ಸುದ್ದಿಯಾಗಿದ್ದರು. ಆದರೆ ಅವರ ಪತಿ ‘ನನ್ನ ಹೆಂಡತಿ ನಾಪತ್ತೆಯಾಗಿದ್ದಾಳೆ’ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅವರ ಕುಟುಂಬ ‘ನಿನಗೂ ನಮಗೂ ಸಂಬಂಧವಿಲ್ಲ’ ಎಂದು ಆಕೆಯೊಂದಿಗಿನ ಸಂಬಂಧವನ್ನೇನಿರಾಕರಿಸಿತ್ತು.

ಶಬರಿಮಲೆ ಏರಿದ್ದ ಬಿಂದು ಅಮ್ಮಿನಿ ಮತ್ತು ಕನಕದುರ್ಗ ಅವರಿಗೆಕಟ್ಟರ್ ವಾದಿಗಳಿಂದ ಜೀವಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಅಜ್ಞಾತಸ್ಥಳದಲ್ಲಿ ಪೊಲೀಸರು ನೆಲೆ ಕಲ್ಪಿಸಿದ್ದರು. ಇವರಿಬ್ಬರೂ ಅಯ್ಯಪ್ಪನ ದರ್ಶನ ಪಡೆದ ನಂತರ ಕೇರಳದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ಮತ್ತಷ್ಟು ಓದು

ಶಬರಿಮಲೆ ದೇಗುಲ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಮಹಿಳೆಯರು

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಸಹಾಯ ಮಾಡಿದ್ದು ಅದೃಶ್ಯ ಗೊರಿಲ್ಲಾ ತಂತ್ರ!

ಅರ್ಧರಾತ್ರಿ ಶಬರಿಗಿರಿ ಏರಿದ ನಾರಿ

ಶಬರಿಮಲೆ ಶಾಸ್ತ: ಇಲ್ಲಿದೆ ಅಯ್ಯಪ್ಪನ ಸಮಗ್ರ ಇತಿ ವೃತ್ತಾಂತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.