ಮದುರೈ: ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಚ್ಐವಿ ಪೀಡಿತ ಯುವಕ (19) ಇಲ್ಲಿನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾನೆ.

ರಾಮನಾಥಪುರಂ ಜಿಲ್ಲೆಯ ಕಮುತಿ ಗ್ರಾಮದ ಈ ಯುವಕ ಶಿವಕಾಶಿ ಬಳಿಯ ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.

ತಮಗೆ ಎಚ್‌ಐವಿ ಸೋಂಕಿರುವ ಕುರಿತು ಮಾಹಿತಿ ಇರದ ಇವರು ನವೆಂಬರ್ 30ರಂದು ರಕ್ತದಾನ ಮಾಡಿದ್ದ. ನಂತರ ವಿದೇಶದಲ್ಲಿ ಕೆಲಸದ ಆಹ್ವಾನ ಬಂದ ಕಾರಣ ವೈದ್ಯಕೀಯ ಪರೀಕ್ಷೆಗೆ ತೆರಳಿದಾಗ ಎಚ್‌ಐವಿ ಸೋಂಕಿರುವ ಕುರಿತು ತಿಳಿದಿತ್ತು. ತಕ್ಷಣ ರಕ್ತ ನಿಧಿ ಘಟಕಕ್ಕೆ ತೆರಳಿದ ಯುವಕ ಸೋಂಕಿರುವ ವಿಷಯ ತಿಳಿಸಿದ್ದಾರೆ. ಅಷ್ಟರೊಳಗೆ ಆ ರಕ್ತವನ್ನು ಗರ್ಭಿಣಿ ಸ್ತ್ರೀಗೆ ನೀಡಿರುವುದಾಗಿ ರಕ್ತ ನಿಧಿ ಘಟಕದ ಸಿಬ್ಬಂದಿ ತಿಳಿಸಿದ್ದಾರೆ.

ತನ್ನ ರಕ್ತ ಪಡೆದ ಗರ್ಭಿಣಿ ಮಹಿಳೆಗೆ ಎಚ್‌ಐವಿ ಸೋಂಕು ತಗುಲಿರಬಹುದು ಎಂದು ಭಾವಿಸಿದ ಯುವಕ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂದು ಆಸ್ಪತ್ರೆಯ ಆಡಳಿತ ವರ್ಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.