ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಅವರ ₹7,000 ಕೋಟಿ ಆಸ್ತಿಯನ್ನು ತಕ್ಷಣವೇ ಜಪ್ತಿ ಮಾಡಲು ಅನುಮತಿ ಕೋರಿ ಜಾರಿ ನಿರ್ದೇಶನಾಲಯ(ಇಡಿ) ಮುಂಬೈ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಅಲ್ಲದೇ ನೀರವ್ ಮೋದಿ ಅವರನ್ನು ದೇಶಭ್ರಷ್ಟ ಎಂದು ಅಧಿಕೃತವಾಗಿ ಘೋಷಿಸಬೇಕೆಂದು ಕೇಳಿದೆ.

ಮೇ .24ರಂದು ಜಾರಿ ನಿರ್ದೇಶನಾಲಯ ₹ 2 ಕೋಟಿ ವಂಚನೆ ಆರೋಪದ ಮೇಲೆ ನೀರವ್ ಮೋದಿ ವಿರುದ್ದ ಮೊದಲ ಬಾರಿ ಆರೋಪ ಪಟ್ಟಿ ಸಲ್ಲಿಸಿದೆ. ಅಲ್ಲದೇ ಸಹವರ್ತಿಗಳ ಜತೆ ಸೇರಿಕೊಂಡು ನಕಲಿ ಕಂಪೆನಿಗಳ ಮೂಲಕ ₹6,400 ಕೋಟಿ ವಂಚಿಸಿದ ಆರೋಪವೂ ಸೇರಿದೆ.

ಈ ಆರೋಪ ಪಟ್ಟಿಯಲ್ಲಿ 24 ಮಂದಿಯಿದ್ದು, ನೀರವ್ ಮೋದಿ ತಂದೆ, ಸಹೋದರ ನಿಶಾಲ್ ಮೋದಿ, ಸಹೋದರಿ ಪೂರ್ವಿ ಮೋದಿಯ ಹೆಸರನ್ನು ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.