ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬಿಜೆಪಿಯ ಆನಂದ್ ಸಿಂಗ್ ಅವರು ಇಲ್ಲಿನ ಕೇರಿಗಳ ದೇವಸ್ಥಾನಗಳಿಗೆ ತೆರಳಿ ಪ್ರತಿ ದೇಗುಲಕ್ಕೆ ತಲಾ 9 ಕೆ.ಜಿ. ಬೆಳ್ಳಿ ಗಟ್ಟಿಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.

ತಳವಾರ ಕೇರಿಯ ದುರುಗಮ್ಮ ದೇವಿ, ಬಾಣದಕೇರಿಯ ನಿಜಲಿಂಗಮ್ಮ ದೇವಿ, ಚಿತ್ರಕೇರಿಯ ತಾಯಮ್ಮ, ಉಕ್ಕಡ
ಕೇರಿಯ ಹುಲಿಗೆಮ್ಮ ಹಾಗೂ ಜಲದುರ್ಗಮ್ಮ, ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ ಹಾಗೂ ಕಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಬೆಳ್ಳಿ ಗಟ್ಟಿಗಳನ್ನು ಸಮರ್ಪಿಸಿದರು.

ಬೆಂಗಳೂರು ಬಳಿಯ ಈಗಲ್‌ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಂದ ಹಲ್ಲೆಗೊಳಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದಾಗಲೂ ಆನಂದ್ ಸಿಂಗ್ ಎಲ್ಲಾ ದೇಗುಲಗಳಿಗೆ ತಲಾ 5 ಕೆ.ಜಿ. ಬೆಳ್ಳಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.