ಮಡಿಕೇರಿ: ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ವ್ಯಕ್ತಿಯೊಬ್ಬ ಕರೆ ಮಾಡಿ, ಅವರ ಮನೆಯ ಮೇಲೆ ಎ.ಸಿ.ಬಿ ದಾಳಿ ನಡೆಯಲಿದ್ದು, ಅದನ್ನು ತಡೆಯಲು ₹ 1 ಕೋಟಿ ನೀಡುವಂತೆ ಬೆದರಿಕೆಯೊಡ್ಡಿರುವ ಸಂಬಂಧ ಪ್ರಕರಣ ದಾಖಲಾಗಿದೆ.

ಬೋಪಯ್ಯ ಅವರು ಮಡಿಕೇರಿಯ ನಿವಾಸದಲ್ಲಿರುವಾಗ ಬುಧವಾರ ಸಂಜೆ 6.30ರ ಸುಮಾರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ.

‘ದಾಳಿಗೆ ಅಧಿಕಾರಿಗಳು ಸಜ್ಜಾಗಿದ್ಧಾರೆ. ಹಣ ನೀಡಿದಿದ್ದರೆ, ದಾಳಿ ನಡೆಯಲಿದೆ ಎಂದು ಆ ವ್ಯಕ್ತಿ ಕನ್ನಡದಲ್ಲಿ ಮಾತನಾಡಿ ಬೆದರಿಕೆಯೊಡ್ಡಿದ. ಅದಕ್ಕೆ ನಾನು ಯಾರಿಗೂ ಹಣ ನೀಡುವುದಿಲ್ಲವೆಂದು ಉತ್ತರಿಸಿದೆ. ಅದಾದ ಕೆಲವೇ ನಿಮಿಷದಲ್ಲಿ ಬೇರೊಂದು ನಂಬರ್ನಿಂದ ಮತ್ತೆ ಕರೆ ಮಾಡಿದ್ದ. ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇನೆ’ ಎಂದು ಬೋಪಯ್ಯ ತಿಳಿಸಿದರು.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಂಧ್ರಪ್ರದೇಶ ಝಹೀಬ್ ಖಾನ್ ಎಂಬಾತನ ಹೆಸರಿನಲ್ಲಿ ಸಿಮ್ ಖರೀದಿಯಾಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.