ಕೊಪ್ಪಳ: ಬೇರೆ ವೃತ್ತಿಗಳಿಗೆ ನಿರ್ದಿಷ್ಟ ಅರ್ಹತೆ ನಿಗದಿ ಮಾಡಿದಂತೆ ಶಾಸಕ ಹಾಗೂ ಸಂಸದರಾಗಲು ಜನಪ್ರತಿನಿಧಿಗಳಿಗೂ ಅರ್ಹತೆ ನಿಗದಿ ಮಾಡಬೇಕು. ಇದಕ್ಕಾಗಿ ಸಂವಿಧಾನ ತಿದ್ಡುಪಡಿ ಮಾಡಬೇಕು ಎಂದು ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಇಲ್ಲಿ ಶನಿವಾರ ನಡೆದ ವಕೀಲರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರುಸದ್ಯ ಸಂವಿಧಾನದ ಪ್ರಕಾರ ಹೆಬ್ಬೆಟ್ಟು ಇದ್ದವರೂ ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಲು ಅವಕಾಶವಿದೆ. ಹೆಬ್ಬಟ್ಟು ಮಾಡುವ ಜನಪ್ರತಿನಿಧಿಗಳು ಕಾನೂನು ಮಾಡುತ್ತಿದ್ದಾರೆ. ಆದ್ದರಿಂದ ಶಾಸಕ ಹಾಗೂ ಸಂಸದರಾಗಲು ಕಾನೂನು ಪದವಿ ಕಡ್ಡಾಯ ಮಾಡಬೇಕು ಎಂದರು.

ಕಾನೂನು ಸಚಿವ ಮಾಧುಸ್ವಾಮಿ ಹಲವಾರು ಕಾನೂನುಗಳನ್ನು ವಾಪಸ್ ಪಡೆದಿದ್ದಾರೆ. ಸದನದಲ್ಲಿ ಮಸೂದೆ ಮಂಡಿಸಿದಾಗ ಅಧ್ಯಕ್ಷರು ಯಾರು ಕಾನೂನು ಪರವಾಗಿ ಇರುವಿರಿ ಎಂದು ಕೇಳಿದಾಗ ನಾವು ಯಾವ ಜ್ಞಾನವಿಲ್ಲದೇ ಸುಮ್ಮನೆ ಕೈ ಎತ್ತುತ್ತೇವೆ. ಆದರೆ, ಕಾನೂನು ಏನೆಂಬುದು ಗೊತ್ತಿಲ್ಲ. ಆದರೂ ಬಹುಮತ ಇದ್ದವರು ಹೇಳಿದ್ದು ಒಪ್ಪಿತವಾಗುತ್ತದೆ ಎಂದರು.

ಇದೆಲ್ಲವೂ ಬದಲಾವಣೆಯಾಗಬೇಕು. ಸದ್ಯ ಇದು ಆಗದಿರಬಹುದು. ಮುಂದೆ ಆಗಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.