ಕಾರವಾರ: ಕಾಂಗ್ರೆಸ್ ದೇಶದಲ್ಲಿ ಅವಾಂತರಗಳನ್ನೇ ಸೃಷ್ಟಿಸಿದೆ. ನಾನಿರುವವರೆಗೆ ಆ ಪಕ್ಷಕ್ಕೆ ನೆಮ್ಮದಿ ನೀಡುವುದಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆನೆ, ಕುರಿಗೆ ಇರುವಷ್ಟು ವ್ಯತ್ಯಾಸ ಇದೆ. ಮೋದಿ ಅವರಿಗೆ ರಾಹುಲ್ ಗಾಂಧಿ ಪ್ರತಿಸ್ಪರ್ಧಿ ಎಂಬುದೇ ದೊಡ್ಡ ಕಾಮಿಡಿ ಎಂದು ಟೀಕಿಸಿದರು.

ನೈತಿಕವಾಗಿ ಕಾಂಗ್ರೆಸ್ ಬೆಲೆ ಕಳೆದುಕೊಂಡಿದೆ. ಸಂಘಟನಾತ್ಮಕವಾಗಿ ಸೊರಗಿದೆ. ಅಭ್ಯರ್ಥಿಯಾಗಲು ಆ ಪಕ್ಷದಲ್ಲಿ ನಾಯಕರು ಮುಂದೆ ಬರುತ್ತಿಲ್ಲ. ಹೈಕಮಾಂಡ್ ಕೇಳಿದರೆ ನಾಯಕರು ಕರಿಮಣಿ ಮಾಲೀಕ ನಾನಲ್ಲ ಎನ್ನುತ್ತಿದ್ದಾರೆ ಎಂದೂ ಲೇವಡಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ, 'ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಪ್ರಚಾರಕ್ಕೆ ಬಂದಿದ್ದರೆ ಪಕ್ಷ ಇನ್ನಷ್ಟು ಸ್ಥಾನದಲ್ಲಿ ಗೆಲುವು ಸಾಧಿಸುತ್ತಿತ್ತು' ಎಂದು ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.