ಕೌಶಲ ಮಂಡಳಿ ರಚನೆಗೆ ಸಿ.ಎಂ ಒಲವು
ಕೌಶಲಾಭಿವೃದ್ಧಿಗೆ ಪ್ರತ್ಯೇಕ ಇಲಾಖೆ ರಚಿಸಿದ ಮೊದಲ ರಾಜ್ಯ ಕರ್ನಾಟಕ. ಹಾಗೆ ಎಲ್ಲಾ ಪಾಲುದಾರರ ಸಹಯೋಗದೊಂದಿದೆ ಕೌಶಲ ಮಂಡಳಿ ರಚಿಸುವ ಚಿಂತನೆ ನಡೆದಿದೆ. ಮಂಡಳಿ ರಚನೆಯಾದರೆ ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಅಂತರ ಕಡಿಮೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಂತ್ರಜ್ಞಾನ ಕಂಪನಿಗಳ 100ಕ್ಕೂ ಹೆಚ್ಚು ಸಿಇಒಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಮಾತನಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೈವಿಕ ತಂತ್ರಜ್ಞಾನ ಗ್ರೂಪ್ ಅಧ್ಯಕ್ಷತೆ ಕಿರಣ್ ಮಜುಂದಾರ್ ಶಾ ಮಾಹಿತಿ ತಂತ್ರಜ್ಞಾನ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಐಟಿ– ಬಿಟಿ ಇಲಾಖೆ ಕಾರ್ಯದರ್ಶಿ ಏಕ್‌ರೂಪ್ ಕೌರ್ ಮತ್ತಿತರರು ಉಪಸ್ಥಿತರಿದ್ದರು.