ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸೋಮವಾರ ಉಮೇದುವಾರಿಕೆ ಸಲ್ಲಿಸಿದ ಹಿರಿಯ ಮುಖಂಡ ಕವಿರಾಜ ಅರಸ್ ಅವರಿಗೆ ಅವರ ಬೆಂಬಲಿಗರು ನಗರದಲ್ಲಿ ಹಾಲಿನ ಅಭಿಷೇಕ ಮಾಡಿದರು.

ಬೆಳಿಗ್ಗೆ ನಗರದ ಬಾಲಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಚುನಾವಣಾಧಿಕಾರಿ ಕಚೇರಿಗೆ ಬಂದು ಅರಸ್ ನಾಮಪತ್ರ ಸಲ್ಲಿಸಿ ಹೊರಬಂದರು. ಈ ವೇಳೆ ಹೊರಗೆ ಕಾದು ನಿಂತಿದ್ದ ಅವರ ಬೆಂಬಲಿಗರು ಅವರಿಗೆ ಮಾಲೆ ಹಾಕಿ, ಕೊಡಗಳಲ್ಲಿ ತುಂಬಿಟ್ಟಿದ್ದ 101 ಲೀಟರ್ ಹಾಲಿನ ಅಭಿಷೇಕ ಮಾಡಿ, ಅಭಿಮಾನ ತೋರಿದರು.

ಬಳಿಕ ಮಾತನಾಡಿದ ಕವಿರಾಜ ಅರಸ್, 'ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ಪಕ್ಷವು ಪಕ್ಷಾಂತರಿ ಆನಂದ್ ಸಿಂಗ್ಗೆ ಮಣೆ ಹಾಕಿ ಮೂಲ, ನಿಷ್ಠಾವಂತರಿಗೆ ಅನ್ಯಾಯ ಮಾಡಿದೆ. ಬೆಂಬಲಿಗರು, ಕಾರ್ಯಕರ್ತರ ಅಭಿಲಾಷೆಯಂತೆ ಚುನಾವಣೆಗೆ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿರುವೆ. ಜಯದ ಭರವಸೆ ಇದೆ. ಯಾವ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ' ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.