ಮೈಸೂರು: ರಂಗನಿರ್ದೇಶಕ ಸಿ.ಬಸವಲಿಂಗಯ್ಯ ಅವರು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ (ಎನ್ಎಸ್ಡಿ) 2018ನೇ ಸಾಲಿನ ಪ್ರತಿಷ್ಠಿತ ‘ಬಿ.ವಿ.ಕಾರಂತ ಸ್ಮೃತಿ ಪುರಸ್ಕಾರ’ಕ್ಕೆ ಭಾಜನರಾಗಿದ್ದಾರೆ.

‘ನಿರ್ದೇಶನ’ ಕ್ಷೇತ್ರದಲ್ಲಿ ಅವರಿಗೆ ಈ ಗೌರವ ಲಭಿಸಿದೆ.

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವ್ಯಾಸಂಗ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಮಾರ್ಚ್ ಕೊನೆಯ ವಾರ ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಎನ್ಎಸ್ಡಿ ಪ್ರಭಾರಿ ನಿರ್ದೇಶಕ ಪ್ರೊ.ಸುರೇಶ್ ಶರ್ಮ ಪತ್ರದಲ್ಲಿ ತಿಳಿಸಿದ್ದಾರೆ.

‘ನನಗಿಂತಲೂ ಹಿರಿಯರು ನಿರ್ದೇಶನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ರಂಗಕರ್ಮಿ, ನಟಿ ಬಿ.ಜಯಶ್ರೀ ಬಳಿಕ ಈ ಪ್ರಶಸ್ತಿ ನನಗೆ ಸಿಗುತ್ತಿರುವುದು ಸಂತಸ ಉಂಟು ಮಾಡಿದೆ’ ಎಂದು ಬಸವಲಿಂಗಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ರಂಗಯಾಣಕ್ಕಾಗಿ ಇವರು ನಿರ್ದೇಶಿಸಿದ ಕುಸುಮಬಾಲೆ, ಟಿಪ್ಪುವಿನ ಕನಸುಗಳು, ಪ್ರಪಂಚ ಪ್ರವಾಹನಾಟಕಗಳು ಇವರಿಗೆ ಹೆಸರು ತಂದುಕೊಟ್ಟವು.

ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ರಂಗಪ್ರಯೋಗಕ್ಕೆ ಅಳವಡಿಸಿದ್ದು ಇವರ ಸಾಧನೆಯ ಪ್ರಮುಖ ಮೈಲುಗಲ್ಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.