ಬೆಂಗಳೂರು: ಕೊರೊನಾದಿಂದಾಗಿ ವಿಧಾನ ಪರಿಷತ್‌ನ ಸದಸ್ಯೆ ಜಯಮಾಲಾ ಅವರ ಪುತ್ರಿಲಂಡನ್ ವಿಮಾನ ನಿಲ್ದಾಣದಲ್ಲಿ, ಡಾ.ವೈ.ಎ.ನಾರಾಯಣಸ್ವಾಮಿ ಅವರ ಪುತ್ರ ಪ್ಯಾರಿಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ. ಆರ್.ಬಿ.ತಿಮ್ಮಾಪೂರ ಅವರ ಪುತ್ರಿ ಬುಧವಾರವಷ್ಟೇ ಲಂಡನ್‌ನಿಂದ ನಗರಕ್ಕೆ ಹಿಂದಿರುಗಿದ್ದಾರೆ. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣಗಳನ್ನೇ ಮುಚ್ಚಿಬಿಟ್ಟರೆ ಹೇಗೆ? ಎಂಬ ಪ್ರಶ್ನೆ ಪರಿಷತ್‌ನಲ್ಲಿ ಚರ್ಚೆಗೆ ಗ್ರಾಸವಾಯಿತು.

ಪರಿಷತ್‌ನಲ್ಲಿ ಕೊರೊನಾ ಸೋಂಕು ಕುರಿತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಸ್ವಯಂಪ್ರೇರಿತ ಹೇಳಿಕೆ ನೀಡಿದ ಸಂದರ್ಭದಲ್ಲಿ ಈ ಮಾಹಿತಿ ಬಹಿರಂಗಗೊಂಡಿತು.

ಬೆಂಗಳೂರು ಮತ್ತು ಮಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣಗಳನ್ನು ಮುಚ್ಚಬೇಕು ಎಂಬ ಸಲಹೆಯನ್ನು ಐವನ್ ಡಿಸೋಜ ನೀಡಿದಾಗ ಜಯಮಾಲಾ ಅವರು ತಮ್ಮ ಪುತ್ರಿ ಲಂಡನ್‌ನಲ್ಲಿ ಸಿಕ್ಕಿಬಿದ್ದಿರುವುದನ್ನು ತಿಳಿಸಿ, ವಿಮಾನನಿಲ್ದಾಣ ಬಂದ್ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಆಗ ಇತರ ಇಬ್ಬರೂ ತಮ್ಮ ಮಕ್ಕಳ ಕತೆ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.