ಕೊಪ್ಪಳ: ‘ಅಂಗನವಾಡಿ ಕಾರ್ಯಕರ್ತೆಯರದ್ದೇ ಆರು–ಏಳು ಸಂಘಟನೆಗಳಿವೆ. ಅವರದ್ದೇ ತಂಡಗಳಿವೆ. ಪದೇ ಪದೇ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಲೇ ಇದ್ದರೆ, ಸದಾ ಅವರ ಬಳಿಯೇ ಇರಲು ಆಗುವುದೇ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್ ಪ್ರಶ್ನಿಸಿದರು.

‘ಒಂದು ಸಂಘಟನೆಯು ಈ ಹಿಂದೆ ಪ್ರತಿಭಟಿಸಿದಾಗ, ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ತಿಳಿಸಿದ್ದೆ. ಅಷ್ಟರಲ್ಲಿ ಮತ್ತೊಂದು ಸಂಘಟನೆ ಪ್ರತಿಭಟನೆ ಆರಂಭಿಸಿತು. ಸಚಿವನಾಗಿ ಹಣಕಾಸಿನ ಎಲ್ಲಾ ಬೇಡಿಕೆಗಳನ್ನು ನಾನೊಬ್ಬನೇ ಈಡೇರಿಸಲು ಆಗದು. ಇದನ್ನು ಬಜೆಟ್ಗೂ ಮುನ್ನ ಸಿ.ಎಂ ಜೊತೆ ಚರ್ಚಿಸುವೆ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ‘ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ನಮ್ಮ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.