ಬೆಂಗಳೂರು: ‘ಇನ್ನೊಂದು ಆರು ತಿಂಗಳೊ, ವರ್ಷಕ್ಕೊ ಅವನೂ ಸಚಿವ ಸ್ಥಾನ ಕಳೆದುಕೊಂಡು ಮನೆಗೆ ಹೋಗುತ್ತಾನೆ. ಏನು ಬೇಕಾದರೂ ಮಾತಾಡ್ತೀನಿ ಎಂದರೆ ನನಗೂ ಎಲ್ಲ ಭಾಷೆ ಬರುತ್ತೆ. ಇದು ಟ್ರಯಲ್ ಅಷ್ಟೇ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ. ಸುರೇಶ್ ಏಕವಚನದಲ್ಲಿ ದಾಳಿ ನಡೆಸಿದರು.

‘ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣ ಮಾಡುವುದಿಲ್ಲ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ‘ನಮ್ಮ ಸರ್ಕಾರ ಇರಲ್ಲ ಎಂದಿರುವ ಕುಮಾರಸ್ವಾಮಿನೂ ಮಂತ್ರಿಯಾಗಿ ಇರಲ್ಲ. ಅವನು ಯಾವ ಕಾರಣಕ್ಕೆ ನಮ್ಮ ಸರ್ಕಾರ ಇರಲ್ಲ ಎಂದು ಹೇಳಿದನೊ ಅದೇ ಕಾರಣಕ್ಕೆ ನಾನೂ ಹೇಳುತ್ತಿದ್ದೇನೆ’ ಎಂದರು.

‘ಆ ಪಾರ್ಟಿನೂ (ಕುಮಾರಸ್ವಾಮಿ) ಸಚಿವನಾಗಿ ಇರುವುದಿಲ್ಲ. ಅವರ ಸರ್ಕಾರವೂ ಇರುವುದಿಲ್ಲ. ಏನು ಬೇಕಾದರೂ ಮಾತಾಡುತ್ತೇನೆ ಎಂದರೆ ಹೇಗೆ? ಅದಕ್ಕೊಂದು ಲೆಕ್ಕ ಇಲ್ಲವೇ? ಕೇಂದ್ರದ ಮಂತ್ರಿ ಆದವರು ಸ್ವಲ್ಪ ತೂಕ ಇಟ್ಟುಕೊಂಡು ಮಾತನಾಡಲಿ’ ಎಂದು ಗುಡುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.