ಬೆಂಗಳೂರು:ಇ–ಆಡಳಿತ ವ್ಯವಸ್ಥೆಯ ಭಾಗವಾಗಿ ಸರ್ಕಾರ ಎಲ್ಲ ಇಲಾಖೆಗಳ ಫಲಾನುಭವಿಗಳಿಗೆ ಆಧಾರ್ ಆಧಾರಿತ ‘ನೇರ ನಗದು ವರ್ಗಾವಣೆ’ಗೆ ಕ್ರಮಕೈಗೊಳ್ಳಲಾಗುತ್ತಿದೆ.

ಮನೆ ಬಾಗಿಲಿಗೆ ಸರ್ಕಾರದ ನಾಗರಿಕ ಸೇವೆಗಳುಯೋಜನೆ ಅಡಿಯಲ್ಲಿ ಆಯ್ದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆಡಳತಿದಲ್ಲಿ ಚಾಟ್‌ಬೋಟ್ ಮತ್ತು ಬಿಗ್‌ಡಾಟಾ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅಗತ್ಯ ಸೌಕರ್ಯಗಳನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದರು.

ಆಡಳಿತದಲ್ಲಿ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಸಚಿವಾಲಯ ಕಚೇರಿಗಳಲ್ಲಿ ‘ಇ–ಆಫೀಸ್’ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರದ ಜಾಲತಾಣಗಳನ್ನು ಒಂದೇ ರೀತಿಯ ವಿನ್ಯಾಸಕ್ಕೆ ಅಳವಡಿಸುವುದು ಹಾಗೂ ವಿಕಲಚೇತನ ಸ್ನೇಹಿಯಾಗಿ ಜಾಲತಾಣ ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗಿದೆ.

ಆಡಳಿತ ತರಬೇತಿ ಕೇಂದ್ರಗಳಲ್ಲಿ ಇ–ಆಡಳಿತ ತರಬೇತಿ ಕೋಶ ಸ್ಥಾಪನೆ, ಸಂಸ್ಥೆಗಳಿಗೆ ಅಗತ್ಯ ಮಾಹಿತಿ ಒದಗಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ’ಇನ್‌ಫೊನೋಮಿಕ್ಸ್’ ಶಾಖೆ ಆರಂಭಿಸಲು ಉದ್ದೇಶಿಸಲಾಗಿದೆ.

ಮಾಹಿತಿ ತಂತ್ರಜ್ಞಾನ

* ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಪಾಲಿಸಿ ಪರಿಷ್ಕರಣೆ ಮೂಲಕ ದ್ವಿತೀಯ, ತೃತೀಯ ದರ್ಜೆ ನಗರಗಳಲ್ಲಿ ಹೂಡಿಕೆಗೆ ಅವಕಾಶ

* ಸ್ಟಾರ್ಟ್‌ಗಳ ಬೆಂಬಲಕ್ಕಾಗಿ ಇನ್‌ಕ್ಯುಬೇಷನ್ ಕೇಂದ್ರಗಳನ್ನು ಬಲಪಡಿಸುವುದು ಹಾಗೂ ಹೊಸ ಕೇಂದ್ರಗಳನ್ನು ಸ್ಥಾಪಿಸುವುದು

* ಹೊಸ ಉದ್ದಿಮೆಗಳ ಪ್ರೋತ್ಸಾಹಕ್ಕಾಗಿ ತುಮಕೂರಿನಲ್ಲಿ ಕೆ–ಟೆಕ್ ಇನೊವೇಷನ್ ಹಬ್; ಇದಕ್ಕಾಗಿ ₹7 ಕೋಟಿ ವೆಚ್ಚ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.