ಚಳ್ಳಕೆರೆ: ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ನಸುಕಿನಲ್ಲಿ ಮಾಳಿಗೆ ಮನೆ ಚಾವಣಿ ಕುಸಿದು ತಾಯಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡ ತಂದೆ ಚಂದ್ರಶೇಖರ ಹಾಗೂ ಅವರ ಅಣ್ಣನ ಮಗಳು ದೇವಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಯಿ ನಾಗರತ್ನಾ (32), ಮಕ್ಕಳಾದ ಯಶ್ವಿನಿ (5), ತೀರ್ಥವರ್ಧನ (3), ಕೋಮಲ (2) ಮೃತಪಟ್ಟವರು.

ಮರದ ತೊಲೆ ಹಾಗೂ ಜಂತಿ ಮಟ್ಟುಗಳನ್ನು ಬಳಸಿ ಮನೆಯ ಚಾವಣಿಗೆ ಕಡಪ ಕಲ್ಲು ಹಾಕಿಸಲಾಗಿತ್ತು. ಮನೆಯ ಒಳಗೆ ಮೂರು ಕಡೆ ಸರ್ವೆ ಪೋಲ್ಸ್‌ಗಳನ್ನು ಆಧಾರವಾಗಿ ನಿಲ್ಲಿಸಲಾಗಿತ್ತು. 30 ವರ್ಷ ಹಳೆಯದಾದ ಈ ಮನೆಯ ತೊಲೆ ಮತ್ತು ಜಂತಿಗೆ ಹುಳು ಹಿಡಿದಿದ್ದವು. ಇದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.