ಬೆಂಗಳೂರು: ಹವಾಮಾನ ಬಿಕ್ಕಟ್ಟು, ಕೃತಕ ಬುದ್ಧಿಮತ್ತೆಯಿಂದ ಶಿಕ್ಷಣ ಹಾಗೂ ಕೌಶಲಗಳ ಭವಿಷ್ಯದ ಮೇಲಾಗುವ ಪರಿಣಾಮಗಳ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ‘ಭವಿಷ್ಯದ ಸಾಕ್ಷರತೆ’ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಕ್ವೆಸ್ಟ್ ಅಲಯನ್ಸ್ ಅ.9 ಮತ್ತು 10ರಂದು ಹಮ್ಮಿಕೊಂಡಿರುವ ಸಮ್ಮೇಳನದಲ್ಲಿ ಶಿಕ್ಷಣ ಮತ್ತು ಉದ್ಯೋಗ, ಉದ್ಯಮ ಕ್ಷೇತ್ರದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ, ಹಸಿರು ಉದ್ಯೋಗಾವಕಾಶ ಕುರಿತು ಚರ್ಚೆಗಳು ನಡೆಯಲಿವೆ. ಹಿಂದಿನ ಶಾಲೆಗಳು ಹಾಗೂ ಭವಿಷ್ಯದ ಶಾಲೆಗಳ ಬೆಳವಣಿಗೆ, 2045ರಲ್ಲಿ ಯುವಜನರ ಜೀವನ ಹೇಗಿರುತ್ತದೆ ಎನ್ನುವ ಮುನ್ನೋಟವನ್ನು ಅಂದು ಆಯೋಜಿಸುವ ಪ್ರದರ್ಶನ ಒದಗಿಸಲಿದೆ.

ಅಸೋಸಿಯೇಷನ್ ಆಫ್ ಪ್ರೊಫೆಷನಲ್ ಫ್ಯೂಚರಿಸ್ಟ್ ಮುಖ್ಯಸ್ಥ ಶೆರ್ಮನ್ ಕ್ರೂಜ್, ನೀತಿ ಆಯೋಗದ ಹಿರಿಯ ತಜ್ಞೆ ಸಾಕ್ಷಿ ಖುರಾನಾ, ರಿಡಿಕ್ಯುಲಸ್ ಫ್ಯೂಚರ್ಸ್‌ನ ತಜ್ಞ ಶಕೀಲ್ ಅಹ್ಮದ್, ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮನೀಷ್ ಮಿಶ್ರಾ ಭಾಗವಹಿಸುವರು ಎಂದು ಕ್ವೆಸ್ಟ್ ಅಲಯನ್ಸ್‌ನ ಸಿಇಒ ಆಕಾಶ್ ಸೇಥಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.