ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊಬೈಲ್ ಟ್ರ್ಯಾಪ್ ಮಾಡಿದರೆ ಪ್ರಜ್ವಲ್ ರೇವಣ್ಣ ಪರಾರಿಯಾಗಲು ಯಾರು ಸಹಕರಿಸಿದರು ಎಂಬುದು ಗೊತ್ತಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರಜ್ವಲ್ ರೇವಣ್ಣನನ್ನು ಬಿಟ್ಟವ್ರು ಸಿದ್ದರಾಮಯ್ಯನವರು, ಪ್ರಶ್ನೆ ಮೋದಿಯವರಿಗೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಪೊಲೀಸ್‌ನವರು ಇದ್ದಾರ ಅಥವಾ ಸತ್ತಿದ್ದಾರಾ? ಇಂಟೆಲಿಜೆನ್ಸ್‌ನವರು ಏನು ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಕರಣದಲ್ಲಿ ರಾಜ್ಯ ಸರ್ಕಾರದ ತಪ್ಪು ಕೇಂದ್ರದ ಮೇಲೆ ಹೊರಿಸುತ್ತಿರುವುದೇಕೆ? ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ ಅಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಲಿಖಿತವಾಗಿ ಬರೆದುಕೊಡಲಿ. ದೇವೇಗೌಡರಿಗೆ ಅಪಮಾನ ಮಾಡಬೇಕೆಂಬ ಸ್ಕೀಮ್ ಇದು ಎಂದು ಆರೋಪಿಸಿದರು.

ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ರಾಜ್ಯ ಸರ್ಕಾರ ಹಿಂದೇಟು ಏಕೆ ಹಾಕುತ್ತಿದೆ. ತಪ್ಪು ಮಾಡಿದರೆ ಬಂಧಿಸಬೇಕು. ಇಡೀ ಪ್ರಕರಣ ನೋಡಿದರೆ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಸಿದ್ದರಾಮಯ್ಯನವರೇ ಕಳಿಸಿದ್ದಾರೆ ಎಂದು ಆರೋಪಿಸಿದರು.
.HD ರೇವಣ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ಅಪಹರಣ ಕೇಸ್ ದಾಖಲು– ಸತೀಶ್ ಬಾಬಣ್ಣ ಬಂಧನ.ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ ಹಿಡಿದು ತರುತ್ತೇವೆ: ಸಿದ್ದರಾಮಯ್ಯ ಗುಡುಗು.ಸಂಪಾದಕೀಯ| ಪ್ರಜ್ವಲ್ ರೇವಣ್ಣ ಪ್ರಕರಣ: ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಿ.ಪೆನ್ಡ್ರೈವ್ ಸಿದ್ಧಪಡಿಸಿದ್ದ ಚಾಲಕನ ವಿರುದ್ಧ ಎಫ್ಐಆರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.