ಟೆಂಡರ್, ಬಿಲ್ ಮಾಡುವುದಷ್ಟೆ ಕೆಲಸವೇ?
ಅಧಿಕಾರಿಗಳು ಬರಿ ಟೆಂಡರ್, ಗುತ್ತಿಗೆ ಹಂಚಿಕೆ, ಎಲ್ಒಸಿ, ಬಿಲ್ ಮಾಡುವ ಕೆಲಸಕ್ಕೆ ಶ್ರಮ ವಿನಿಯೋಗ ಮಾಡುತ್ತಿದ್ದಾರೆ. ಯೋಜನೆಗಳ ಅನುಷ್ಠಾನಕ್ಕೆ ಆ ಶ್ರಮ ಬಳಕೆಯಾಗಬೇಕು ಎಂದು ಸಚಿವ ಶಿವಕುಮಾರ್ ಹೇಳಿದರು.
ಭ್ರಷ್ಟಾಚಾರಕ್ಕೆ ಆಸ್ಪದ ನೀಡಬಾರದು. ನಿಷ್ಠೆ, ಪ್ರಾಮಾಣಿಕತೆಗೆ ಪ್ರೋತ್ಸಾಹ ನೀಡಬೇಕು. ಜಾತಿಯತೆ ತೊರೆಯಬೇಕು. ಮಾನವೀಯತೆ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.
ಅಧಿಕಾರಿಗಳು ತಮಗೆ ಸ್ಥಾನಕೊಟ್ಟವರಿಗೆ ಬದ್ಧವಾಗಿರದೆ, ಸರ್ಕಾರಕ್ಕೆ ನಿಷ್ಠರಾಗಿರಬೇಕು. ಇಲ್ಲದಿದ್ದರೆ ಅಂಥವರನ್ನು ಸಹಿಸುವುದಿಲ್ಲ. ಮೇಕೆದಾಟು ಯೋಜನೆಗೆ ಮೀಸಲಿಟ್ಟ₹ 1,000 ಕೋಟಿ ಅನುದಾನವನ್ನು ಭೂಸ್ವಾಧೀನದಂತಹ ಪೂರ್ವಸಿದ್ಧತಾ ಕೆಲಸಗಳಿಗೆ ಬಳಸಬಹುದಿತ್ತು. ಆ ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದರು.