ಕೋಲಾರ: ‘ಕಳೆದ ಚುನಾವಣೆಯಲ್ಲಿ ₹ 17 ಕೋಟಿ ಸಾಲ ಮಾಡಿದ್ದು, ಇನ್ನೂ ತೀರಿಸಿಲ್ಲ. ಈ ಬಾರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ. ಅವರನ್ನು ನಿಲ್ಲಿಸಿ ಗೆಲ್ಲಿಸಿದರೆ ನನ್ನನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುತ್ತಾರೆ...’

ಕೋಲಾರ ಕ್ಷೇತ್ರದ ಶಾಸಕ ಕೆ. ಶ್ರೀನಿವಾಸಗೌಡ, ಬೆಂಬಲಿಗರೊಬ್ಬರ ಜೊತೆ ದೂರವಾಣಿಯಲ್ಲಿ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟ ಉದ್ದೇಶವನ್ನೂ ಅವರು ವಿವರಿಸಿದ್ದಾರೆ.

ವೇಮಗಲ್ನ ಚನ್ನೇಗೌಡ ಎಂಬ ಬೆಂಬಲಿಗರೊಬ್ಬರು, ಶ್ರೀನಿವಾಸಗೌಡ ಅವರೇ ಸ್ಪರ್ಧಿಸಬೇಕೆಂದು ಮನವಿ ಮಾಡಿಕೊಂಡಾಗ ಈ ರೀತಿ ಮಾತನಾಡಿದ್ದಾರೆ.

ಖರ್ಚಿಗೆ ಸಾಲ ಮಾಡಿದ್ದು ನಿಜ: ಕಾರ್ಯಕರ್ತನ ಜೊತೆಗಿನ ಸಂಭಾಷಣೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶ್ರೀನಿವಾಸಗೌಡ, ‘ಕಳೆದ ಚುನಾವಣೆಯಲ್ಲಿ ಖರ್ಚಿಗೆ ಸಾಲ ಮಾಡಿದ್ದಾಗಿ ಹೇಳಿರುವುದು ನಿಜ. ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿ ಗೆದ್ದರೆ ಜಿಲ್ಲೆಗೆ ಹಲವಾರು ರೀತಿ ಅವಕಾಶ ಸಿಗಲಿವೆ ಹಾಗೂ ಅಭಿವೃದ್ಧಿ ಕೆಲಸ ನಡೆಯಲಿವೆ ಎಂಬರ್ಥದಲ್ಲಿ ಹೇಳಿದ್ದೇನೆ. ಮಂತ್ರಿ ವಿಚಾರ ಮಾತನಾಡಿಲ್ಲ. ಕಾರ್ಯಕರ್ತರ ಜೊತೆ ತಮಾಷೆಗೆ ಕೆಲವೊಂದು ವಿಚಾರ ಮಾತನಾಡುತ್ತೇವೆ’ ಎಂದರು.

‘ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ಒಮ್ಮೆ ಮಂತ್ರಿಯೂ ಆಗಿದ್ದೇನೆ. ನಾನ್ಯಾಕೇ ಮತ್ತೆ ಎಂಎಲ್ಸಿ ಸ್ಥಾನಕ್ಕೆ ಬೇಡಿಕೆ ಇಡಲಿ’ ಎಂದು ಅವರು ಪ್ರಶ್ನಿಸಿದರು. 2018ರಲ್ಲಿ ಅವರು ಜೆಡಿಸ್ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಅವರು ಈಗ ಕಾಂಗ್ರೆಸ್ ಜೊತೆ ಗುರುತಿಸಿ ಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.