ಬೆಂಗಳೂರು: ಟಿಕೆಟ್ಗಾಗಿ ತೀವ್ರ ಕಸರತ್ತು ನಡೆಸುತ್ತಿರುವ ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಮೂರನೇ ಪಟ್ಟಿಯ ಲ್ಲಾದರೂ ತಮ್ಮ ಹೆಸರು ಘೋಷಿಸುವಂತೆ ಸಿದ್ದರಾಮಯ್ಯ ಅವರನ್ನು ಸೋಮವಾರ ಮತ್ತೊಮ್ಮೆ ಭೇಟಿ ಮಾಡಿ ಆಗ್ರಹಿಸಿದರು.

ದೆಹಲಿಗೆ ತೆರಳುವ ಮಾಹಿತಿ ಗೊತ್ತಾಗುತ್ತಿದ್ದಂತೆ ಅವರ ನಿವಾಸಕ್ಕೆ ಶಾಸಕ ಜಮೀರ್ ಅಹ್ಮದ್ ಜೊತೆ ತರಾತುರಿಯಲ್ಲಿ ಬಂದ ಅಖಂಡಶ್ರೀನಿವಾಸಮೂರ್ತಿ, ಟಿಕೆಟ್ ಕೈ ತಪ್ಪದಂತೆ ಬೆನ್ನಿಗೆ ನಿಲ್ಲಬೇಕೆಂದು ಅವರ ಬಳಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದವರೆಗೆ ಸಿದ್ದರಾಮಯ್ಯ ಜೊತೆಗೇ ತೆರಳಿದರು.

‘ಕೆ.ಜಿ. ಹಳ್ಳಿ, ಡಿ.ಜಿ. ಹಳ್ಳಿ ಘಟನೆಯ ಕಾರಣಕ್ಕೆ ಅಖಂಡ ಅವರಿಗೆ ಟಿಕೆಟ್ ಕೊಡಲು ಸಾಧ್ಯವಾಗದೇ ಇದ್ದರೆ, ನನಗೆ ಟಿಕೆಟ್ ಕೊಡಿ. ಅಷ್ಟೇ ಅಲ್ಲ, ಮಾಜಿ ಮೇಯರ್ ಸಂಪತ್ರಾಜ್ ಅವರಿಗೂ ಟಿಕೆಟ್ ನೀಡಬಾರದು. ಈ ಘಟನೆಯಲ್ಲಿ ಆರೋಪಿಯಾಗಿ ಸಂಪತ್ರಾಜ್ ಕೂಡಾ ಜೈಲು ಸೇರಿದ್ದರು’ ಎಂದು ಅಖಂಡ ಶ್ರೀನಿವಾಸಮೂರ್ತಿ ಸಹೋದರ ಶ್ರೀಧರ್ ರಾಮಯ್ಯ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.