ಶಿವಮೊಗ್ಗ:ಇಲ್ಲಿನ ಕರ್ನಾಟಕ ಸಂಘ 2018ನೇ ಸಾಲಿನ ಪುಸ್ತಕ ಬಹುಮಾನ ಪ್ರಕಟಿಸಿದೆ.

ಜಿ.ಎಸ್.ಭಟ್ಟ ಅವರ ‘ಅಕ್ಕಮ್ಮಜ್ಜಿಯ ಗಂಡನೂ ವಾಣಸಜ್ಜನ ಹೆಂಡ್ತಿಯೂ’ ಕಾದಂಬರಿಗೆ ಕುವೆಂಪು ಬಹುಮಾನ, ಪಾರ್ವತಿ ಜಿ. ಐತಾಳ್ ಅವರ ‘ಮಲೆಯಾಳದ ಮಹಿಳಾ ಕಥನ’ ಅನುವಾದ ಕೃತಿಗೆ ಪ್ರೊ.ಎಸ್.ಬಿ.ಪರಮೇಶ್ವರ ಭಟ್ಟ, ಡಾ.ವಿನಯಾ ಅವರ ‘ಉಡಿಯಕ್ಕಿ’ ಕೃತಿಗೆ ಎಂ.ಕೆ.ಇಂದಿರಾ, ಪ್ರೊ ಅಬ್ದುಲ್ ಬಷೀರ್ ಅವರ ‘ಧರ್ಮ ಸಮನ್ವಯ ಸಾಹಿತ್ಯ ವಿಮರ್ಶೆ’ ಕೃತಿಗೆ ಪಿ.ಲಂಕೇಶ್, ನಂದಿನಿ ವಿಶ್ವನಾಥ್ ಹೆದ್ದುರ್ಗ ಅವರ ‘ಒಳಸೆಲೆ’ ಕವನ ಸಂಕಲನಕ್ಕೆ ಡಾ.ಜಿ.ಎಸ್. ಶಿವರುದ್ರಪ್ಪ, ನರೇಂದ್ರ ರೈ ದೇರ್ಲಾ ಅವರ ‘ನೆಲಮುಖ’ ಅಂಕಣ ಬರಹಕ್ಕೆ ಡಾ.ಹಾ.ಮಾ.ನಾಯಕ, ಎಸ್.ಗಂಗಾಧರಯ್ಯ ಅವರ ‘ದೇವರ ಕುದುರೆ’ ಸಣ್ಣ ಕಥಾ ಸಂಕಲನಕ್ಕೆ ಡಾ.ಯು.ಆರ್. ಅನಂತಮೂರ್ತಿ, ದು.ಸರಸ್ವತಿ ಅವರ ‘ಸಣ್ತಿಮ್ಮಿ ಪುರಾಣ’ ನಾಟಕಕ್ಕೆ ಡಾ.ಕೆ.ವಿ. ಸುಬ್ಬಣ್ಣ, ಪ್ರಸಾದ್ ನಾಯ್ಕ ಅವರ ‘ಹಾಯ್ ಅಂಗೋಲಾ’ ಪ್ರವಾಸ ಸಾಹಿತ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ, ಡಾ.ಪಾಲಹಳ್ಳಿ ವಿಶ್ವನಾಥ್ ಅವರ ‘ವಿಶ್ವದ ವೈವಿಧ್ಯ’ ವಿಜ್ಞಾನ ಸಾಹಿತ್ಯ ಕೃತಿಗೆ ಹಸೂಡಿ ವೆಂಕಟಶಾಸ್ತ್ರಿ, ನಿರ್ಮಲಾ ಸುರತ್ಕಲ್ ಅವರ ‘ಹೇಳು ನೋಡೋಣ’ ಮಕ್ಕಳ ಸಾಹಿತ್ಯ ಕೃತಿಗೆ ಡಾ.ನಾ.ಡಿಸೋಜ ಬಹುಮಾನ ಹಾಗೂ ಡಾ.ಪತಂಜಲಿ ಅವರ ‘ಅಜೀರ್ಣ’ ವೈದ್ಯ ಸಾಹಿತ್ಯ ಕೃತಿಗೆ ಡಾ.ಎಚ್.ಡಿ. ಚಂದ್ರಪ್ಪಗೌಡ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

ಪ್ರತಿ ಬಹುಮಾನವೂ ತಲಾ ₹ 10 ಸಾವಿರ ನಗದು ಪುರಸ್ಕಾರ ಒಳಗೊಂಡಿದೆ. ಜೂನ್ 29ರ ಸಂಜೆ 6ಕ್ಕೆ ಸಂಘದ ಸಭಾಂಗಣದಲ್ಲಿ ಬಹುಮಾನ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 2.30ಕ್ಕೆ ಬಹುಮಾನ ವಿಜೇತ ಲೇಖಕಕರ ಜತೆ ಸಂವಾದ ಇರುತ್ತದೆ ಎಂದು ಸಂಘದ ಕಾರ್ಯದರ್ಶಿ ಎಚ್.ಎಸ್.ನಾಗಭೂಷಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.