ಬೆಂಗಳೂರು: ರಾಜ್ಯದ 65 ಇಲಾಖೆಗಳು ಹಾಗೂ 11 ಸ್ವಾಯತ್ತ ಸಂಸ್ಥೆಗಳಲ್ಲಿ ₹2,809. 97 ಕೋಟಿಗಳಷ್ಟು ಹೆಚ್ಚುವರಿ ಪಾವತಿ, ಅಕ್ರಮ ಪಾವತಿ ಹಾಗೂ ಕಾಲ್ಪನಿಕ ಖರೀದಿ ಮಾಡಲಾಗಿದೆ ಎಂದು ಭಾರತೀಯ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.

ಮಾರ್ಚ್ 2019ಕ್ಕೆ ಕೊನೆಗೊಂಡ ವರ್ಷದ (ಸಾಮಾನ್ಯ ಹಾಗೂ ಸಾಮಾಜಿಕ ವಲಯ) ಸಿಎಜಿ ವರದಿಯನ್ನು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಮಂಡಿಸಿದರು.

ಕರ್ನಾಟಕ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ₹755.07 ಕೋಟಿ ದಂಡದ ಬಡ್ಡಿ ಸೇರಿದಂತೆ ಆದಾಯ ತೆರಿಗೆ ಇಲಾಖೆಗೆ ₹2,358.94 ಕೋಟಿ ಹೆಚ್ಚುವರಿ ಹೊಣೆಗಾರಿಕೆ ಹೊರಬೇಕಾಯಿತು. ತೆರಿಗೆ ವಿನಾಯಿತಿ ಪಡೆಯಲು ಆದಾಯ ತೆರಿಗೆ ಕಾಯ್ದೆ– 1961ರಲ್ಲಿ ಲಭ್ಯವಿರುವ ನಿಬಂಧನೆಗಳನ್ನು ಮಂಡಳಿ ಅನಸರಿಸಿದ್ದರೆ ಅದನ್ನು ತಪ್ಪಿಸಬಹುದಿತ್ತು.

ಆದಾಯ ತೆರಿಗೆಯ ಪೂರ್ಣ ಮೊತ್ತವನ್ನು ಮಂಡಳಿಯು ಪಾವತಿಸಬೇಕಾದರೆ ಅದನ್ನು ನಿರ್ಮಾಣ ಕಾರ್ಮಿಕರ ಕಲ್ಯಾಣ ಯೋಜನೆಗಳ ಅನುಷ್ಢಾನಕ್ಕೆ ಮೀಸಲಿಟ್ಟಿರುವ ಮಂಡಳಿಯ ಸ್ವೀಕೃತಿಗಳಿಂದ ಭರಿಸಬೇಕಾಗುತ್ತದೆ. ಇದು, ದಂಡ ಸೇರಿದಂತೆ ಕಲ್ಯಾಣ ನಿಧಿಯ ಶೇ 43ರಷ್ಟು ವೆಚ್ಚ ಮಾಡಿದಂತಾಗುತ್ತದೆ. ಫಲಾನುಭವಿಗಳ ಅನುಕೂಲಕ್ಕಾಗಿ ಶೇ 57 ಮಾತ್ರ ಲಭ್ಯವಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಂಡಳಿಯು 2013ರಿಂದ 2016ರ ಅವಧಿಯಲ್ಲಿ ಜಾಹೀರಾತು ಹಾಗೂ ಪ್ರಚಾರಕ್ಕಾಗಿ ₹3.93 ಕೋಟಿ ವೆಚ್ಚ ಮಾಡಿತ್ತು. ಇದು ಸ್ವೀಕಾರಾರ್ಹ ಅಲ್ಲ. ಅದನ್ನು ಮರುಭರ್ತಿ ಮಾಡುವುದು ಅವಶ್ಯ ಎಂದು ವರದಿಯಲ್ಲಿ ಹೇಳಲಾಗಿದೆ.

ಸಿಎಜಿ ವರದಿಯ ಸಾರ

l ಆರೋಗ್ಯ ಕವಚ ಆಂಬುಲೆನ್ಸ್ ಚಾಲಕರು ಹಾಗೂ ತುರ್ತು ನಿರ್ವಹಣಾ ತಜ್ಞರ ಹುದ್ದೆಗಳಲ್ಲಿ ಕ್ರಮವಾಗಿ ಶೇ 20 ಹಾಗೂ ಶೇ 21 ಹುದ್ದೆಗಳು ಖಾಲಿ ಇದ್ದವು. ಇದರಿಂದಾಗಿ, 2014ರಿಂದ 2019ರ ಅವಧಿಯಲ್ಲಿ ಆಂಬುಲೆನ್ಸ್‌ಗಳು 41,342 ದಿನಗಳ ವರೆಗೆ ಕಾರ್ಯಾಚರಣೆಯಿಂದ ಹೊರಕ್ಕೆ ಉಳಿದವು.

l ಮೇವು ಖರೀದಿಗೆ ಕೊಳ್ಳೇಗಾಲದ ತಹಶೀಲ್ದಾರ್ ಅವರು ತಪ್ಪಾದ ದರ ನಿಗದಿ ಮಾಡಿದ್ದರಿಂದ ಸರಬರಾಜುದಾರರಿಗೆ ₹77.51 ಲಕ್ಷ ಹೆಚ್ಚುವರಿ ಪಾವತಿ.

l ಸರ್ಕಾರಿ ಅನುದಾನಿತ ಖಾಸಗಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಶುಲ್ಕ ರಿಯಾಯಿತಿ ಯೋಜನೆಯನ್ನು ಕಾಲೇಜು ಶಿಕ್ಷಣ ಇಲಾಖೆ ಅನುಷ್ಠಾನಗೊಳಿಸಲಿಲ್ಲ. ಇದರಿಂದಾಗಿ, ವಿದ್ಯಾರ್ಥಿನಿಯರು ₹9.68 ಕೋಟಿ ಶುಲ್ಕ ಪಾವತಿಸುವಂತಾಯಿತು.

l ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹಂಚಿಕೆದಾರರಿಂದ ನಿವೇಶನದ ವೆಚ್ಚವನ್ನು ವಸೂಲಿ ಮಾಡದೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದ್ದರಿಂದ ₹10.24 ಕೋಟಿ ನಷ್ಟ. ಜತೆಗೆ, ಪ್ರಾಧಿಕಾರದಿಂದ ಗುತ್ತಿಗೆದಾರರಿಗೆ ₹1.92 ಕೋಟಿ ಹೆಚ್ಚುವರಿ ಪಾವತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.