ವಿಜಯಪುರ: ಮಹಾನಗರ ಪಾಲಿಕೆಗೆ ಸೇರಿದ ಸಾರ್ವಜನಿಕ ಖುಲ್ಲಾ ಜಾಗವನ್ನುಶಾಸಕ ಬಸನಗೌಡ ಪಾಟೀಲ ಯತ್ನಾಳ ಅತಿಕ್ರಮಿಸಿಕೊಂಡು, ಅನಧಿಕೃತವಾಗಿ ಶಾಲಾ ಕಟ್ಟಡ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ನಗರದ ಅಥಣಿ ರಸ್ತೆಯ ಕೋರ್ಟ್ ಕಾಲೊನಿಯಲ್ಲಿ ಉದ್ಯಾನಕ್ಕೆ ಮೀಸಲಿಡಲಾಗಿರುವ ಸರ್ವೆ ನಂ.688/ಬಿ, ಫ್ಲಾಟ್ ನಂ.99ರಲ್ಲಿ1 ಎಕರೆ 14 ಗುಂಟೆ ಜಾಗವನ್ನು ಶಾಸಕರು ಅತಿಕ್ರಮಣಮಾಡಿಕೊಂಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತರಾದ ಸನ್ನಿ ಗವಿಮಠ ಮತ್ತು ಅಬ್ದುಲ್ ಹಮೀದ್ ಇನಾಂದಾರ ಆರೋಪಿಸಿದ್ದಾರೆ.

ಅತಿಕ್ರಮಿಸಿಕೊಂಡಿರುವ ಜಾಗದಲ್ಲಿ ಶಾಸಕರು ಅಧ್ಯಕ್ಷರಾಗಿರುವ ಸಿದ್ದೇಶ್ವರ ಸಂಸ್ಥೆ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಶಿಶುನಿಕೇತನ ಸಿಬಿಎಸ್‌ಇ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದುದೂರಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ದೂರು ಕೊಡುವ ಮುನ್ನಾ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬಳಿಕೆ ಮಾಡಿಕೊಂಡಿರುವ ಜಾಗವನ್ನು ಶಾಸಕರು ಗೌರವಯುತವಾಗಿ ಮಹಾನಗರ ಪಾಲಿಕೆಗೆ ಮರಳಿಸಬೇಕು ಹಾಗೂತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯತ್ನಾಳ ಅವರನ್ನು ಬಿಜೆಪಿಯಿಂದ ವಜಾಮಾಡಬೇಕು ಎಂದು ಅವರು ಆಗ್ರಹಿಸಿದರು.

ಕರೆ ಸ್ವೀಕರಿಸಲಿಲ್ಲ:

ಭೂ ಕಬಳಿಕೆ ಆರೋಪದಕುರಿತು ಪ್ರತಿಕ್ರಿಯೆ ಪಡೆಯಲು ಶಾಸಕರಿಗೆ ‘ಪ್ರಜಾವಾಣಿ’ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಪರಿಶೀಲಿಸುತ್ತೇನೆ:

‘ಪಾಲಿಕೆಯ ಖಾಲಿ ಜಾಗ ಕಬಳಿಕೆಯಾಗಿರುವ ಬಗ್ಗೆ ನನಗೆ ಯಾವುದೇ ದೂರು ಬಂದಿಲ್ಲ. ಕಬಳಿಕೆ ಆಗಿರುವುದು ಸಿಎ ನಿವೇಶನವೂ ಅಥವಾ ಪಾಲಿಕೆ ಖುಲ್ಲಾ ಜಾಗವೂ ಎಂಬುದನ್ನು ಪರಿಶೀಲಿಸುತ್ತೇನೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.