Photos | ಮಂಗಳೂರು: ಉಕ್ಕಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರಾ ನದಿಗಳು
ಮಂಗಳೂರು: ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಗರಿಷ್ಠ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಜನವಸತಿ, ಕೃಷಿ ಭೂಮಿಗೆ ನೀರು ನುಗ್ಗಿದೆ.ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ, ದಿಡುಪೆ, ಕಲ್ಬೆಟ್ಟು ಗ್ರಾಮಗಳಲ್ಲಿ ನೇತ್ರಾವತಿ ನದಿ ನೀರು ಉಕ್ಕಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಲ್ಬೆಟ್ಟು ಸಂಪರ್ಕ ಸೇತುವೆ ಹಾಗೂ ರಸ್ತೆ ಕುಸಿದಿದ್ದು, 150 ಮಂದಿಗೆ ಸಂಪರ್ಕ ರಸ್ತೆ ಇಲ್ಲದಂತಾಗಿದೆ.ತಾಲ್ಲೂಕಿನ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಅಲ್ಲಿನ ಜನರನ್ನು ಸ್ಥಳಾಂತರಿಸಲು ತಾಲ್ಲೂಕು ಆಡಳಿತ ಸೂಚನೆ ನೀಡಿದೆ.ಬಂಟ್ವಾಳದಲ್ಲಿಯೂ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇಲ್ಲಿ ನದಿಯ ಗರಿಷ್ಠ ಮಟ್ಟ 8.5 ಮೀಟರ್ ಇದ್ದು, ಶನಿವಾರ ಬೆಳಿಗ್ಗೆ 9 ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿದೆ. ಗೂಡಿನಬಳಿಯಲ್ಲಿ ನದಿಯ ನೀರು ರಸ್ತೆಯನ್ನು ಆವರಿಸಿದೆ. ಅಜಿಲಮೊಗರು ಮಸೀದಿಯ ಆವರಣಕ್ಕೂ ನೀರು ನುಗ್ಗಿದೆ.
Published : 8 ಆಗಸ್ಟ್ 2020, 6:10 IST