ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು ವಿಶ್ವವಿದ್ಯಾಲಯ ಬೋಧಕ ಸಿಬ್ಬಂದಿ ನೇಮಕಾತಿ: ST, ಒಬಿಸಿಗಿಲ್ಲ ಮೀಸಲಾತಿ

Published : 4 ನವೆಂಬರ್ 2024, 1:10 IST
Last Updated : 4 ನವೆಂಬರ್ 2024, 1:10 IST
ಫಾಲೋ ಮಾಡಿ
Comments
ಎಸ್‌ಟಿ ಮತ್ತು ಒಬಿಸಿ ಮೀಸಲಾತಿ ನೀಡದೇ ಇರುವುದರಿಂದ ಈ ಸಮುದಾಯಗಳ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳ ಜತೆ ಸ್ಪರ್ಧಿಸುವಂತಾಗಿದೆ
ಶಿವಪ್ರಸಾದ್ ಕೆ.ಎನ್‌. ಅಭ್ಯರ್ಥಿ
ಮಹಿಳಾ ಮೀಸಲಾತಿಯನ್ನೂ ನೀಡದೇ ಇರುವ ಕಾರಣಕ್ಕೆ ನನ್ನ ಹಲವು ವಿದ್ಯಾರ್ಥಿನಿಯರು ಎಲ್ಲರೊಂದಿಗೆ ಸ್ಪರ್ಧಿಸಬೇಕಾದ ಅನಿವಾರ್ಯ ಎದುರಾಗಿದೆ
ರಾಜಣ್ಣ ಎಂ. ಸಹಾಯಕ ಪ್ರಾಧ್ಯಾಪಕ ನ್ಯಾಷನಲ್ ಕಾಲೇಜು ಬೆಂಗಳೂರು
ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದರೂ ಪ್ರಯೋಜನ ಆಗಿಲ್ಲ. ನಿಯಮಗಳ ಅನ್ವಯವೇ ರೋಸ್ಟರ್‌ ಮಾಡಿದ್ದೇನೆ ಬದಲಾವಣೆ ಸಾಧ್ಯವಿಲ್ಲ ಎನ್ನುತ್ತಾರೆ
ಪ್ರೊ.ಎಂ.ವಿಶ್ವನಾಥ್‌ ನಿಕಟಪೂರ್ವ ಕುಲಸಚಿವ ರಾಯಚೂರು ವಿಶ್ವವಿದ್ಯಾಲಯ
ತೊಡಕು ನಿವಾರಿಸದ ರಾಜ್ಯ ಸರ್ಕಾರ
ವಿಷಯವಾರು ಮೀಸಲಾತಿ ನೀಡುವುದನ್ನು ತಪ್ಪಿಸಲು ಕಾನೂನಾತ್ಮಕ ತೊಡಕು ಇದ್ದು ಅದನ್ನು ನಿವಾರಿಸಲು ರಾಜ್ಯದ ಯಾವ ಸರ್ಕಾರಗಳು ಪ್ರಯತ್ನ ಮಾಡಿಲ್ಲ. ‘ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಷಯವಾರು ಮೀಸಲಾತಿ ಅನ್ವಯ ಮಾಡಬೇಕು’ ಎಂದು ಕೋರಿ 1981ರಲ್ಲಿ ರಾಜ್ಯ ಹೈಕೋರ್ಟ್‌ಗೆ ರಿಟ್‌ ಅರ್ಜಿ (13096/83) ಸಲ್ಲಿಕೆಯಾಗಿತ್ತು. ಅದನ್ನು ಹೈಕೋರ್ಟ್‌ ಮಾನ್ಯ ಮಾಡಿತ್ತು. ರಾಜ್ಯ ಸರ್ಕಾರ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ಆದೇಶವನ್ನೇ ಎತ್ತಿ ಹಿಡಿದಿತ್ತು. ರಾಜ್ಯದಲ್ಲಿ ಈಗಲೂ ಅದನ್ನೇ ಪಾಲಿಸಲಾಗುತ್ತಿದೆ. ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ (ವರ್ಗಾವಣೆಗೆ ಅವಕಾಶವಿಲ್ಲದ ಹುದ್ದೆಗಳು) ವಿಷಯವಾರು ಮೀಸಲಾತಿ ಅನ್ವಯ ಮಾಡಬಾರದು ಎಂದು 2006ರಲ್ಲಿ ಯುಜಿಸಿ ನಿಯಮಾವಳಿ ರೂಪಿಸಿತ್ತು. ಇದರ ವಿರುದ್ಧವೂ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್‌ ಅರ್ಜಿಯನ್ನು 2019ರಲ್ಲಿ ಮಾನ್ಯ ಮಾಡಿತ್ತು. ‘ವಿಷಯವಾರು ಮೀಸಲಾತಿ’ಯನ್ನು ನಿಷೇಧಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರವು 2019ರಲ್ಲೇ ಜಾರಿಗೆ ತಂದಿತು. ಹಲವು ರಾಜ್ಯ ಸರ್ಕಾರಗಳು ಇದನ್ನು ಪಾಲಿಸಿರಲಿಲ್ಲ. ಹೀಗಾಗಿ 2024ರ ಏಪ್ರಿಲ್‌ನಲ್ಲಿ ಎಲ್ಲ ಕೇಂದ್ರೀಯ ರಾಜ್ಯ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ನಿಯಮ ಪಾಲಿಸುವಂತೆ ಯುಜಿಸಿ ಸೂಚಿಸಿತು.  ಆದರೆ 1981ರ ಹೈಕೋರ್ಟ್‌ ಆದೇಶ ಮತ್ತು ಅದನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ಆದೇಶವನ್ನು ತೆರವು ಮಾಡಿಸಿಕೊಳ್ಳದೇ ಇರುವ ಕಾರಣಕ್ಕೆ ಯುಜಿಸಿ ನಿಯಮಗಳನ್ನು ಜಾರಿಗೆ ತರಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT