ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ.ಯಲ್ಲಿರುವ ಯುವತಿ, ಇದೀಗ ಮತ್ತೊಂದು ವಿಡಿಯೊ ಹರಿಬಿಟ್ಟಿದ್ದಾರೆ. ‘ವಿಶೇಷ ತನಿಖಾ ತಂಡ (ಎಸ್ಐಟಿ) ಯಾರ ಪರವಿದೆ. ಯಾರನ್ನು ರಕ್ಷಿಸುತ್ತಿದೆ’ ಎಂದು ಯುವತಿ ಪ್ರಶ್ನಿಸಿದ್ದಾರೆ.

‘ನನಗಾದ ಅನ್ಯಾಯಕ್ಕೆ ನ್ಯಾಯ ಕೇಳಿ, ಒಂದು ವಿಡಿಯೊ ಮಾಡಿದ್ದೆ. ಅದನ್ನು ಕಮಿಷನರ್ ಕಚೇರಿ ಹಾಗೂ ಎಸ್ಐಟಿಯವರಿಗೆ ಮಾರ್ಚ್ 13ರಂದು ತಲುಪಿಸಿದ್ದೆ. ಅದರ ಮರುದಿನವೇ ತರಾತುರಿಯಲ್ಲಿ ರಮೇಶ ಜಾರಕಿಹೊಳಿ ದೂರು ಕೊಟ್ಟಿದ್ದಾರೆ. ಅದಾದ ಅರ್ಧ ಗಂಟೆಗೆ ನನ್ನ ವಿಡಿಯೊ ಹೊರಗೆ ಬಿಡಲಾಗಿದೆ. ಹಾಗಾದರೆ, ಎಸ್ಐಟಿ ಯಾರ ಪರವಿದೆ? ಇಲ್ಲಿ ಯಾರನ್ನು ರಕ್ಷಣೆ ಮಾಡಲಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಯುವತಿ ವಿಡಿಯೊದಲ್ಲಿ ಕೇಳಿದ್ದಾರೆ.

‘ನನ್ನನ್ನು ಅಪಹರಣ ಮಾಡಲಾಗಿದೆ ಎಂದು ನಮ್ಮ ಅಪ್ಪ ಅಮ್ಮ ಸ್ವ–ಇಚ್ಛೆಯಿಂದ ದೂರು ಕೊಟ್ಟಿರುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ, ಅವರಿಗೆ ಗೊತ್ತು ಮಗಳು ಯಾವುದೇ ತಪ್ಪು ಮಾಡಿಲ್ಲ ಎಂದು. ನನಗೆ, ನನ್ನ ಅಪ್ಪ–ಅಮ್ಮನ ಸುರಕ್ಷತೆ ಮುಖ್ಯ. ಅವರು ಸುರಕ್ಷಿತವಾಗಿ ಇದ್ದಾರೆ ಎಂಬುದು ಯಾವಾಗ ಗೊತ್ತಾಗುತ್ತದೆಯೋ ಅವಾಗಲೇ ನಾನು ಎಸ್ಐಟಿ ಮುಂದೆ ಬಂದು ಏನು ಹೇಳಿಕೆ ನೀಡಬೇಕು? ಹಾಗೂ ಯಾವೆಲ್ಲ ಪ್ರಕ್ರಿಯೆ ಮಾಡಬೇಕು ಎಂಬುದನ್ನು ಮಾಡುತ್ತೇನೆ’ ಎಂದೂ ಯುವತಿ ಹೇಳಿದ್ದಾರೆ.

‘ಅದಕ್ಕಿಂತ ಮುಂಚೆ ನಾನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್ ಅವರಿಗೆ ಹಾಗೂ ಇನ್ನಿತರ ಮಹಿಳಾ ಸಂಘಟನೆಗಳಿಗೆ ಇಷ್ಟೇ ಕೇಳಿಕೊಳ್ಳುವುದು. ನನ್ನ ಅಪ್ಪ–ಅಮ್ಮನಿಗೆ ಭದ್ರತೆ ಕೊಡಿ’ ಎಂದೂ ಯುವತಿ ಕೋರಿದ್ದಾರೆ.

‘ನನಗೆ ನ್ಯಾಯ ಸಿಗುತ್ತದೆ ಎಂದು, ಎರಡು ದಿನದಿಂದ ಭರವಸೆ ಬಂದಿದೆ’ ಎಂದೂ ಯುವತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.