ಮೈಸೂರು: ಆಣೆ ಪ್ರಮಾಣ ಮಾಡುತ್ತೇವೆ ಎಂದಿದ್ದ ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಹಾಗೂ ಶಾಸಕ ಸಾ.ರಾ.ಮಹೇಶ್ ಅವರ ಪ್ರಹಸನ ಗುರುವಾರ ಚಾಮುಂಡಿಬೆಟ್ಟದಲ್ಲಿ ನಡೆಯಿತು.

ಇಬ್ಬರೂ ಪ್ರತ್ಯೆಕವಾಗಿ ಬಂದು ದೇವರ ದರ್ಶನ ಪಡೆದರು. ಆದರೆಮುಖಾಮುಖಿಯಾಗಲಿಲ್ಲ. ಬಳಿಕ ಪ್ರತ್ಯೇಕವಾಗಿ ಪರಸ್ಪರ ದೋಷಾರೋಪ ಮಾಡಿದರು.

ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ಸಾ.ರಾ.ಮಹೇಶ್ ವಿರುದ್ಧ ಎಚ್.ವಿಶ್ವನಾಥ್ ಕಿಡಿ

ಈ ವೇಳೆ ಅಡಗೂರು ಎಚ್.ವಿಶ್ವನಾಥ್ ಮಾತನಾಡಿ, ‘ನನ್ನನ್ನು ₹ 25 ಕೋಟಿಗೆ ಖರೀದಿಸಿದವರನ್ನು ಕರೆದುಕೊಂಡು ಬರುತ್ತೇನೆ ಎಂದು ಸಾ.ರಾ.ಹೇಳಿದ್ದಾರೆ. ಹಾಗಾಗಿ ಬಂದಿದ್ದೇನೆ. ನಾನಿಲ್ಲಿ ಆಣೆ ಪ್ರಮಾಣ ಮಾಡಲು ಬಂದಿಲ್ಲ’ಎಂದು ಹೇಳಿದರು. ಅಲ್ಲದೆ, ‘ನಾನು ಪ್ರಮಾಣ ಮಾಡುತ್ತೇನೆ ಎಂದು ಹೇಳಿಲ್ಲ . ನೀವು ನನ್ನ ಹೇಳಿಕೆಯನ್ನು ತಿರುಚಿದ್ದೀರಿ’ಎಂದು ಅವರು ಮಾಧ್ಯಮದವರ ವಿರುದ್ದ ಹರಿಹಾಯ್ದರು.

‘ಸಾ.ರಾ.ಮಹೇಶ್ ಒಬ್ಬ ಪಲಾಯನವಾದಿ ಹಾಗೂ ಹೇಡಿ. ನಾನು ಈ ಕುರಿತು ಕಾನೂನು ಹೋರಾಟ ಆರಂಭಿಸುವೆ’ ಎಂದು ಅವರು ಹೇಳಿದರು.

ಇದನ್ನೂ ಓದಿ:ಎಚ್.ವಿಶ್ವನಾಥ್ ವಿರುದ್ಧ ಮಾಡಿದ ಆರೋಪಗಳಿಗೆ ಬದ್ಧ: ಸಾ.ರಾ.ಮಹೇಶ್

ಸಾ.ರಾ.ಮಹೇಶ್ ಮಾತನಾಡಿ, ‘ನನ್ನ ವಿರುದ್ದ ಮಾಡಿರುವ ಆರೋಪ ನಿಜ ಎಂದು ಹಾಗೂ ಅವರು ಹಣ ಪಡೆದಿಲ್ಲ ಎಂದು ವಿಶ್ವನಾಥ್ ಆಣೆ ಮಾಡಬೇಕಿತ್ತು. ಆದರೆ ಅವರು ಮಾಡದೇ ಹೋಗಿದ್ದಾರೆ. ವಿಶ್ವನಾಥ್ ಅವರನ್ನು ಖರೀದಿಸಿದವರನ್ನು ಕರೆತರುತ್ತೇನೆ’ ಎಂದು ಹೇಳಿಲ್ಲ ಎಂದರು. ಈ ವೇಳೆ, ಮಹೇಶ್ ದೇಗುಲದ ಒಳಗೆ ಭಾವುಕರಾಗಿ ಕಣ್ಣೀರು ಹಾಕಿದರು.

ಇಬ್ಬರೂ ಸುಮಾರು ಒಂದು ಗಂಟೆಗಳ ಕಾಲ ಪ್ರತ್ಯೇಕವಾಗಿ ಕಾದು ನಿಂತಿದ್ದರು. ಮಹೇಶ್ ಅವರು ದೇಗುಲದ ಒಳಗೆ ಸುಮಾರು ಒಂದು ಗಂಟೆ ಕಾಲ ಇದ್ದರು. ಆಗ ವಿಶ್ವನಾಥ್ ಹೊರಗಡೆ ಕಾದುನಿಂತಿದ್ದರು. ವಿಶ್ವನಾಥ್ ಕಾರು ಹತ್ತಿ ತೆರಳಿದ ಬಳಿಕ ಮಹೇಶ್ ದೇಗಲದಿಂದ ಹೊರಬಂದರು.

ವಿಶ್ವನಾಥ್ ಏಟು

lಇಷ್ಟು ಹೊತ್ತಾದರೂ ದೇಗುಲದಿಂದ ಹೊರಬಾರದೆ ಬಚ್ಚಿಟ್ಟುಕೊಂಡಿದ್ದಾರೆ. ಮಹೇಶ್ ಪಲಾಯನವಾದಿ, ಹೇಡಿ.

lನಾನಿಲ್ಲಿ ಆಣೆ ಪ್ರಮಾಣ ಮಾಡಲು ಬಂದಿಲ್ಲ

l₹ 25 ಕೋಟಿಗೆ ಮಾರಾಟವಾಗಿದ್ದೇನೆ ಎಂದು ಆರೋಪಿಸಿರುವ ಮಹೇಶ್, ನನ್ನನ್ನು ಖರೀದಿಸಿದ ಭೂಪನನ್ನು ಕರೆದುಕೊಂಡು ಬರುವಂತೆ ಸವಾಲೆಸೆದಿದ್ದೆ. ಆತನನ್ನು ನೋಡಲು ಬಂದಿದ್ದೇನೆ

l‘ಮಹೇಶ್ ಸಾವಿರ ಹೇಳುತ್ತಾರೆ. ಮಾಧ್ಯಮದವರೂ ಕೇಳುತ್ತೀರಿ. ಕೇಳಿದ ಎಲ್ಲರಿಗೂ ನಾನು ಆಣೆ ಮಾಡಲಾ?

lಜನರು ಏನಾದರೂ ಅಂದುಕೊಳ್ಳಲಿ. ನನ್ನ ಮನಸ್ಸು ಗಾಸಿಗೊಂಡಿದ್ದು, ಸಮಾಧಾನಕ್ಕಾಗಿ ಇಲ್ಲಿಗೆ ಬಂದಿದ್ದೇನೆ

lಸಾ.ರಾ.ಮಹೇಶ್ ವಿರುದ್ಧಕಾನೂನು ಹೋರಾಟ ಆರಂಭಿಸಲಾಗುವುದು

ಸಾ.ರಾ.ಮಹೇಶ್ ಎದಿರೇಟು

lಇನ್ನು ಮುಂದೆ ವಿಶ್ವನಾಥ್ ಮುಖ ನೋಡುವುದಿಲ್ಲ

lಆಣೆ ಮಾಡುವಂತೆ ಕರೆದಿದ್ದಕ್ಕಾಗಿಯೇ ಬಂದಿದ್ದೇನೆ.

lವಿಶ್ವನಾಥ್ ಮಾರಾಟವಾಗಿದ್ದಾಗಿ ನಾನು ಸದನದಲ್ಲಿ ನೀಡಿದ ಹೇಳಿಕೆ ಸತ್ಯ ಎಂದು ಪ್ರಮಾಣ ಮಾಡಿದ್ದೇನೆ

lನನ್ನಿಂದ ಜೆಡಿಎಸ್ಗೆ ದುರ್ಗತಿ ಬಂದಿತೋ ಅಥವಾ ವಿಶ್ವನಾಥ್ ಅವರ ವರ್ಗಾವಣೆ ದಂಧೆ, ಹಣದ ಆಸೆಯಿಂದ ಬಂದಿತೋ ಎಂದು ಪ್ರಮಾಣ ಮಾಡಬೇಕು.

lನನ್ನನ್ನು ವೈಯಕ್ತಿಕವಾಗಿ ನಿಂದಿಸಿರುವುದು ಸರಿ ಹಾಗೂ ಸತ್ಯ ಎಂದು ವಿಶ್ವನಾಥ್ ಪ್ರಮಾಣ ಮಾಡಬೇಕು

lಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಲೂ ಮನಸ್ಸಾಗುತ್ತಿಲ್ಲ

ಇನ್ನಷ್ಟು...

ವಿಶ್ವನಾಥ್ ಚಾಮುಂಡೇಶ್ವರಿ ಎದುರು ಪ್ರಮಾಣ ಮಾಡಿದರೆ ಕ್ಷಮೆ ಯಾಚಿಸುವೆ–ಸಾ.ರಾ ಮಹೇಶ್

ರಾಜೀನಾಮೆ ಸಲ್ಲಿಸಿರುವೆ: ಮಹೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.