ಗೋಕಾಕ: ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹಾಗೂ ಸಹೋದರ, ಶಾಸಕ ಸತೀಶ ಅವರ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ತಮ್ಮ ಬೆಂಬಲಿಗರ ಮೇಲೆ ಹಲ್ಲೆ ಮಾಡಿರುವ, ರಮೇಶ ಅವರ ಬೆಂಬಲಿಗ ರಾಜು ತಳವಾರ ಅವರನ್ನು ಹೊಡೆಯುತ್ತೇನೆ ಎಂದು ಸತೀಶ ಪೊಲೀಸರ ಎದುರೇ ಆವಾಜ್ ಹಾಕಿರುವ ವಿಡಿಯೊ ವೈರಲ್ ಆಗಿದೆ.

ತಾಲ್ಲೂಕಿನ ಅಂಕಲಗಿಯಲ್ಲಿ ಶುಕ್ರವಾರ ರಾತ್ರಿ ರಮೇಶ ಹಾಗೂ ಅವರ ಅಳಿಯ ಅಂಬಿರಾವ್ ಪಾಟೀಲ ಅವರ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು ಎನ್ನಲಾಗಿದೆ. ತಮ್ಮ ಬೆಂಬಲಿಗರ ಜೊತೆ ಪೊಲೀಸ್ ಠಾಣೆಗೆ ಶನಿವಾರ ಆಗಮಿಸಿದ ಸತೀಶ ಅವರು ರಾಜು ತಳವಾರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

‘ರಮೇಶ ಬೆಂಬಲಿಗ ರಾಜು ತಳವಾರ ನನ್ನ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದಾನೆ. ಅವನನ್ನು ಬಿಡುವುದಿಲ್ಲ. ರಮೇಶ ಹಾಗೂ ಅಂಬಿರಾವ್ ಪಾಟೀಲ ಎದುರೇ ಹೊಡೆಯುತ್ತೇನೆ. ಆ ತಾಕತ್ತು ನನಗಿದೆ. ಅವನನ್ನು ಹೇಗೆ ಸಂಭಾಳಿಸುತ್ತಿರೋ ಸಂಭಾಳಿಸಿ. ಎಸ್ಪಿಗೆ ಹೇಗೆ ಮನವರಿಕೆ ಮಾಡಿಕೊಡುತ್ತೀರೊ ಮಾಡಿ. ಆದರೆ, ನಮ್ಮ ಜನರಿಗೆ ನ್ಯಾಯ ಸಿಗಬೇಕು’ ಎಂದು ಪೊಲೀಸರಿಗೆ ಹೇಳಿದರು.

‘ನಾನೇನು ಇದರ ಬಗ್ಗೆ ದೂರು ನೀಡಲ್ಲ. ನನಗೆ ಗೊತ್ತು ಈ ದೂರುಗಳಿಂದ ಏನೂ ಪ್ರಯೋಜನವಾಗುವುದಿಲ್ಲ. ನೀವು ಅವನನ್ನು ಹೇಗೆ ನಿಯಂತ್ರಿಸುತ್ತಿರೋ ಗೊತ್ತಿಲ್ಲ. ಮತ್ತೆ ಇಂತಹ ಘಟನೆಗಳು ನಡೆದರೆ ಆತ (ರಾಜು ತಳವಾರ) ಮನೆಗೆ ಹೋಗುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಲಖನ್ ಜಾರಕಿಹೊಳಿ ಕೂಡ ಅವರ ಜೊತೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.