ಹಿರಿಯಡಕ (ಉಡುಪಿ ಜಿಲ್ಲೆ): ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ನೇತೃತ್ವದ ಲಿಬರಲ್ ಪಾರ್ಟಿಯಿಂದ ವಿಕ್ಟೋರಿಯ ರಾಜ್ಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕನ್ನಡತಿ ಉಡುಪಿಯ ಪೆರ್ಡೂರಿನ ಶಿಲ್ಪಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವ ರಾಜ್ಯ ಕಮಿಟಿ ಇದಾಗಿದೆ.

ಪೆರ್ಡೂರಿನ ಮೋಹನದಾಸ್ ಹೆಗ್ಡೆ ಮತ್ತು ಶಶಿಕಲಾ ಹೆಗ್ಡೆ ದಂಪತಿಯ ಪುತ್ರಿಯಾಗಿರುವ ಶಿಲ್ಪಾ ಹೆಗ್ಡೆ, ಪೆರ್ಡೂರಿನಲ್ಲಿ ಹುಟ್ಟಿ ಬೆಳೆದಿದ್ದು, ನಿಟ್ಟೆಯಲ್ಲಿ ತಾಂತ್ರಿಕ ಶಿಕ್ಷಣವನ್ನು ಮುಗಿಸಿ, 2001 ರಿಂದ ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಆಸ್ಟ್ರೇಲಿಯಾದ ಜನಪ್ರಿಯ 10 ಮಹಿಳಾ ರಾಜಕಾರಣಿಗಳಲ್ಲಿ 2 ನೇ ಸ್ಥಾನ ಪಡೆದಿರುವ ಶಿಲ್ಪಾ, 2013 ರಲ್ಲಿ ಆಸ್ಟ್ರೇಲಿಯಾ ಫೆಡರಲ್ ಚುನಾವಣೆಯಲ್ಲಿ ವಿಕ್ಟೋರಿಯಾದ ವಿಲ್ಸ್ ಕ್ಷೇತ್ರಕ್ಕೆ ಲಿಬರಲ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

'20 ವರ್ಷಗಳಿಂದ ಆಸ್ಟ್ರೇಲಿಯಾದ ಲಿಬರಲ್ ಪಾರ್ಟಿಯಲ್ಲಿ ಪತಿ ದಯಾನಂದ ಹೆಗ್ಡೆ ಹಾಗೂ ಮನೆಯವರ ಸಹಕಾರದಿಂದ ಸಕ್ರಿಯವಾಗಿದ್ದು, ಆಸ್ಟ್ರೇಲಿಯಾ ಆಡಳಿತ ಕಮಿಟಿಯಲ್ಲಿ ಸ್ಥಾನ ಪಡೆದದ್ದು ಸಂತೋಷ ತಂದಿದೆ' ಎಂದು ಶಿಲ್ಪಾ ಹೆಗ್ಡೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.