ಗದಗ: ತೋಂಟದಾರ್ಯ ಮಠದ 20ನೇ ಪೀಠಾಧಿಕಾರಿಯಾಗಿ ಡಾ. ಸಿದ್ದರಾಮ ಸ್ವಾಮೀಜಿ ಅವರು ಸೋಮವಾರ ಪದಗ್ರಹಣ ಮಾಡಿದರು.

ವಿವಿಧ ಮಠಾಧೀಶರಿಂದ ಮೊಳಗಿದ ವಚನ, ಪಠಣ, ಜಯಘೋಷಗಳು ಮಠದಲ್ಲಿ ಸಂಭ್ರಮ ಹೆಚ್ಚಿಸಿತ್ತು.

ವಾದ್ಯ ಮೇಳಗಳ ವೈಭವದೊಂದಿಗೆ ಪೀಠ ಏರಿದ ನೂತನ ಶ್ರೀ.ಡಾ. ಸಿದ್ದರಾಮ ಸ್ವಾಮೀಜಿ ಅವರಿಗೆ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಎಂದು ಮರು ನಾಮಕರಣ ಮಾಡಲಾಯಿತು. ಹುಬ್ಬಳ್ಳಿಯ ಮೂಜಗು ಶ್ರೀ ಗಳು ನಾಮಕರಣದ ವಿಧಿ ಬೋಧಿಸಿದರು.

ಈ ವೇಳೆ ಶಾಸಕ ಎಚ್.ಕೆ. ಪಾಟೀಲ, ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.