ವಿದ್ಯಾರ್ಥಿಗಳಿಗೆ ಏನು ಅನುಕೂಲ ಮಾಡಿಕೊಟ್ಟಿದ್ದೀರಿ ಎಂದು ಶ್ರೇಷಾದ್ರಿಪುರಂ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ್ದ ನ್ಯಾಕ್ ಸಮಿತಿ ಕೇಳಿತ್ತು. ‘ಪ್ರಜಾವಾಣಿ’ಯ ‘ಮಾಸ್ಟರ್‌ಮೈಂಡ್’ ಪ್ರತಿ ತೋರಿಸಿದೆವು. ‘ಎ ಡಬಲ್ ಪ್ಲಸ್’ ಗ್ರೇಡ್ ದೊರೆಯಿತು.
–ವುಡೇ ಪಿ. ಕೃಷ್ಣ ಶಿಕ್ಷಣ ತಜ್ಞ
ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿದರೆ ಬೇರೆಯವರ ಮಾತು ಕೇಳಿಸಿಕೊಳ್ಳಬೇಕು. ‘ಪ್ರಜಾವಾಣಿ’ ನೀಡುತ್ತಿರುವ ಸ್ಪರ್ಧಾವಾಣಿ ಎಂಬ ಬ್ಲೂಟೂತ್ ಬಳಸಿದರೆ ನಿಮ್ಮ ಧ್ವನಿ ನಿಮಗೇ ಕೇಳಿಸುತ್ತದೆ. ಯಶಸ್ಸು ಸಿಗುತ್ತದೆ.
–ರವೀಂದ್ರ ಭಟ್ಟ ಕಾರ್ಯನಿರ್ವಾಹಕ ಸಂಪಾದಕ ಪ್ರಜಾವಾಣಿ.
‘ಪ್ರಜಾವಾಣಿ’ ಓದಿದ ಬಹುತೇಕರು ಸ್ಪರ್ಧಾ ಪರೀಕ್ಷೆಗಳಲ್ಲಿ ಯಶಸ್ಸು ಕಂಡಿದ್ದಾರೆ. ಹೊಸದಾಗಿ ರೂಪಿಸಲಾದ ‘ಸ್ಪರ್ಧಾವಾಣಿ’ ಓದಿನ ಸಮಯವನ್ನು ಇನ್ನಷ್ಟು ಉಳಿಸುತ್ತದೆ. ಹೆಚ್ಚಿನ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತದೆ.
–ಪಿ.ಮಣಿವಣ್ಣನ್ ಪ್ರಧಾನ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ.