ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸುಜಾತಾ ಹೋಲ್ಕರ್ ಅವರಿಗೆ ₹ 50 ಲಕ್ಷ ಗೆಲ್ಲುವ ಪ್ರಶ್ನೆಯನ್ನು ನಟ ರಮೇಶ್ ಅರವಿಂದ್ ಅವರು ಕೇಳಲಿದ್ದಾರೆ. ಇದು ಗುರುವಾರ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.

ಬುಧವಾರ ರಾತ್ರಿ ಪ್ರಸಾರ ಆದ ಕಾರ್ಯಕ್ರಮದಲ್ಲಿ ಸುಜಾತಾ ಅವರು ₹ 25 ಲಕ್ಷ ಗೆದ್ದುಕೊಂಡಿದ್ದಾರೆ. ಅವರ ಬಳಿ ಒಂದು ಲೈಫ್‌ಲೈನ್ ಬಾಕಿ ಇದೆ. ₹ 50 ಲಕ್ಷದ್ದೂ ಸೇರಿದಂತೆ ಎರಡು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ಸುಜಾತಾ ಅವರು ಕೋಟ್ಯಧಿಪತಿ ಆಗಲಿದ್ದಾರೆ.

ಸುಜಾತಾ ಅವರದ್ದು ಬಾಲ್ಯ ವಿವಾಹ, ಅವರು ಎರಡು ವರ್ಷದ ಮಗುವಾಗಿದ್ದಾಗಲೇ ವಿವಾಹ ಬಂಧನಕ್ಕೆ ಒಳಗಾದವರು. ಅವರು ಬಿ.ಎ. ಪದವೀಧರೆಯೂಹೌದು. ಒಂದು ಕೋಟಿ ರೂಪಾಯಿ ಗೆಲ್ಲುವುದರಿಂದ ಅವರು ಎರಡೇ ಎರಡು ಹೆಜ್ಜೆ ಹಿಂದೆ ಇದ್ದಾರೆ ಎಂದು ವಾಹಿನಿಯ ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.