ಬೆಳಗಾವಿ: ಉಡಾನ್–3 ಯೋಜನೆಯಡಿ ಬೆಂಗಳೂರು–ಬೆಳಗಾವಿ–ಬೆಂಗಳೂರು ಮಾರ್ಗದಲ್ಲಿ ಇಂಡಿಗೊ ಏರ್ಲೈನ್ಸ್ ವಿಮಾನ ಹಾರಾಟಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭಾನುವಾರ ಚಾಲನೆ ನೀಡಿದರು.

ವಿಮಾನವನ್ನು ‘ವಾಟರ್ ಸಲ್ಯೂಟ್’ (ಜಲ ಫಿರಂಗಿ) ಮೂಲಕ ಸ್ವಾಗತಿಸಲಾಯಿತು. ಮೆ.ಇಂಡಿಗೊ ಕಂಪನಿಯು ಇಲ್ಲಿಂದ ಇದೇ ಮೊದಲಿಗೆ ವಿಮಾನ ಕಾರ್ಯಾಚರಣೆ ನಡೆಸುತ್ತಿದೆ. ಇದರ ಅಂಗವಾಗಿ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಆಪ್ಟೆಕ್ ಏವಿಯೇಷನ್ ಅಕಾಡೆಮಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.

ಈ ವೇಳೆ ಮಾತನಾಡಿದ ಸಚಿವರು, ‘ಬೆಳಗಾವಿಯಿಂದ ಬೆಳಿಗ್ಗೆಯ ವೇಳೆ ವಿಮಾನ ಹಾರಾಟಕ್ಕೆ ಕ್ರಮ ಕೈಗೊಳ್ಳಬೇಕು. ಚೆನ್ನೈ ಹಾಗೂ ನವದೆಹಲಿಗೆ ವಿಮಾನ ಸೇವೆಯನ್ನು ಆದಷ್ಟು ಬೇಗ ಒದಗಿಸಬೇಕು’ ಎಂದು ಸಲಹೆ ನೀಡಿದರು.

‘ಮಂಗಳವಾರ ಹೊರತುಪಡಿಸಿ ಉಳಿದೆಲ್ಲ ದಿನಗಳೂ ಮಧ್ಯಾಹ್ನ 12.50ಕ್ಕೆ ಇಲ್ಲಿಗೆ ಬರುವ ಈ ವಿಮಾನ, ಮಧ್ಯಾಹ್ನ 1.10ಕ್ಕೆ ಬೆಂಗಳೂರಿಗೆ ತೆರಳುತ್ತದೆ. ಮೊದಲ ದಿನ ಶೇ 95ರಷ್ಟು ಸೀಟುಗಳು ಭರ್ತಿಯಾಗಿದ್ದವು’ ಎಂದು ವಿಮಾನಿಲ್ದಾಣ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ ತಿಳಿಸಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೊರೆ, ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಬಿಜೆಪಿ ಮುಖಂಡ ಜಗದೀಶ ಮೆಟಗುಡ್ಡ, ನಿಲ್ದಾಣದ ನಿರ್ದೇಶಕ (ಎಒ ಮತ್ತು ಸಿಎಸ್) ವರುಣ್ ದ್ವಿವೇದಿ, ಇಂಡಿಗೊ ಏರ್ಲೈನ್ಸ್ ಸ್ಟೇಷನ್ ವ್ಯವಸ್ಥಾಪಕ ನಾಗೇಶ್, ಏರ್ಮನ್ ತರಬೇತಿ ಶಾಲೆಯ ಅನಿಲ್ಕುಮಾರ್ ಯಾದವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.