ರಾಮನಗರ: ಮಂಗಳೂರು ಗಲಭೆಗೆ ಕಾರಣರಾದವರು ಯಾರೇ ಆದರೂ ಸರ್ಕಾರ ಕ್ರಮ ಕೈಗೊಳ್ಳಲಿ. ಆದರೆ, ಈಗ ವೈರಲ್ ಆಗಿರುವ ವಿಡಿಯೊ ಸತ್ಯಾಸತ್ಯತೆ ಬಗ್ಗೆ ಮೊದಲು ತನಿಖೆ ಆಗಲಿ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.

ಚನ್ನಪಟ್ಟಣದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಗಲಭೆ ಕುರಿತ ವಿಡಿಯೊವೊಂದು ಈಗ ವೈರಲ್ ಆಗಿದೆ. ಆದರೆ ಅದು ಎಷ್ಟರಮಟ್ಟಿಗೆ ನಿಜ. ಘಟನೆ ದಿನವೇ ಪೊಲೀಸರಿಗೆ ಯಾಕೆ ಸಿಗಲಿಲ್ಲ’ ಎಂದು ಪ್ರಶ್ನಿಸಿದರು.

ಗೋಲಿಬಾರ್ ಸಮರ್ಥನೆಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಪೊಲೀಸರ ಹೇಳಿಕೆಯಲ್ಲೇ ಗೊಂದಲಗಳಿವೆ. ಅವರ ಮಾತು ಒಪ್ಪಲು ನಾವು ಕಿವಿಯಲ್ಲಿ ಹೂ ಮುಡಿದುಕೊಂಡಿಲ್ಲ ಎಂದರು.

ಇದನ್ನೂ ಓದಿ...ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಶೀಲ ಕೆಡಿಸಿದೆ: ದೇವನೂರ ಮಹಾದೇವ

ಎಚ್‌ಡಿಕೆಗೆ ಅಡ್ರಸ್ ಗೊತ್ತಿಲ್ಲ ಎನ್ನುವವರು ಹಿಂದೊಮ್ಮೆ ನನ್ನ ಅಡ್ರಸ್ ಹುಡುಕಿಕೊಂಡು ಬಂದಿದ್ದನ್ನೇ ಮರೆತಿದ್ದಾರೆ. ಜನರೇ ಮುಂದೆ ನನ್ನ ಅಡ್ರಸ್ ತೋರಿಸುತ್ತಾರೆ ಎಂದು ಟೀಕಿಸಿದರು.

ರಾಮನಗರ ಜಿಲ್ಲೆ ಅಭಿವೃದ್ಧಿ ಬಗ್ಗೆ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿಕೆಗೆ ಪ್ರತಿಕ್ರಿಯಿಸಿ ‘ಅವರು ನನಗಿಂತ ಬುದ್ಧಿವಂತ ಇದ್ದಾರೆ. ನಾನು ಯಾರಿಗೂ ಸುಳ್ಳು ಸರ್ಟಿಫಿಕೆಟ್ ಕೊಡಿಸಿಲ್ಲ. ರಾಜ್ಯದಲ್ಲಿ ಒಬ್ಬರಿಗೆ ನರ್ಸ್ ರಾಜ್ ಎಂಬ ಬಿರುದಿದೆ. ಅದು ಯಾಕೆ ಬಂತು ಎನ್ನುವುದನ್ನು ಅವರು ಅರಿಯಲಿ' ಎಂದು ಟಾಂಗ್ ನೀಡಿದರು.

ಇದನ್ನೂ ಓದಿ...ಮಂಗಳೂರು ಗಲಭೆ: ನ್ಯಾಯಾಂಗ ತನಿಖೆಗೆ ಖಾದರ್ ಒತ್ತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.