ಬೆಂಗಳೂರು: ‘ಆರ್‌ಎಸ್‌ಎಸ್‌ನ ಶಾಖೆಯಲ್ಲಿ ಕೋಮುದ್ವೇಷದ ಕತೆಗಳನ್ನು ಹೇಳಿಕೊಡಲಾಗುತ್ತಿತ್ತು. ಹೀಗಾಗಿ ಮಕ್ಕಳನ್ನು ಶಾಖೆಗೆ ಕಳುಹಿಸುವುದನ್ನು ನಿಲ್ಲಿಸಿದೆ’ ಎಂದು ಸಾಹಿತಿ ಡಾ.ವಿಜಯಾ ಹೇಳಿದರು.

‘ಆತ್ಮಕತೆಯ ಕಥೆ’ ಗೋಷ್ಠಿಯಲ್ಲಿ ಸಭಿಕರೊಬ್ಬರು, ವಿಜಯಾ ಅವರ ‘ಕುದಿ ಎಸರು’ ಕೃತಿಯಲ್ಲಿ ಆರ್‌ಎಸ್‌ಎಸ್ ಶಾಖೆಯ ಉಲ್ಲೇಖವಿರುವ ಬಗ್ಗೆ ಪ್ರಶ್ನಿಸಿದರು. ‘ಶಾಖೆಯಲ್ಲಿ ಚೆನ್ನಾಗಿ ಆಟವಾಡಿಸುತ್ತಾರೆ ಮತ್ತು ಕಥೆಗಳನ್ನು ಹೇಳುತ್ತಾರೆ ಎಂದು ಮಕ್ಕಳು ಹೇಳುತ್ತಿದ್ದರು. ಆ ಕಥೆಗಳನ್ನು ಮಕ್ಕಳಿಂದ ಕೇಳಿಸಿಕೊಂಡೆ. ಅವು ಕೋಮುಭಾವನೆಗಳನ್ನು ಉದ್ದೀಪಿಸುವ ಕಥೆಗಳಾಗಿದ್ದವು. ಇದನ್ನೇ ನನ್ನ ಆತ್ಮಕತೆಯಲ್ಲಿ ಉಲ್ಲೇಖಿಸಿದ್ದೇನೆ’ ಎಂದು ವಿಜಯಾ ಹೇಳಿದರು.

‘ಭಾರತದ ಸಂದರ್ಭದಲ್ಲಿ ಗಾಂಧೀಜಿ ಅವರ ಸತ್ಯಾನ್ವೇಷಣೆ ಎಂಬ ದೇಶಕಟ್ಟುವ ಮತ್ತು ದೇಶದ ಬರ್ಬರತೆಯನ್ನು ಬಿಚ್ಚಿಡುವ ಅಂಬೇಡ್ಕರ್ ಅವರ ಬಹಿಷ್ಕೃತ ಭಾರತ ಎಂಬ ಆತ್ಮಕತೆಗಳಿವೆ. ಅಂತಹ ಆತ್ಮಕತೆಗಳನ್ನು ಮತ್ತೆ ಬರೆಯಲು ಸಾಧ್ಯವಿಲ್ಲ. ಹಿಟ್ಲರ್ ಒಂದು ಭೀಕರವಾದ ಆತ್ಮಕತೆ ಬರೆದಿದ್ದ. ಭಾರತದ ಈಗಿನ ಸಂದರ್ಭದಲ್ಲಿ ಹಿಟ್ಲರ್‌ನ ಆತ್ಮಕತೆಯಂತಹದನ್ನು ಬರೆಯುವವರು ನೂರಾರು ಮಂದಿ ಇದ್ದಾರೆ’ ಎಂದು ಕತೆಗಾರ ಮೊಗಳ್ಳಿ ಗಣೇಶ್ ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.