ಬೆಂಗಳೂರು: ಸಾವಿರಾರು ಎಕರೆ ಸರ್ಕಾರಿ ಜಮೀನನ್ನು ‘ಬೋಗಸ್ ಗ್ರ್ಯಾಂಟ್’ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನಪರಿಷತ್ನಲ್ಲಿ ಬುಧವಾರ ಶೂನ್ಯವೇಳೆಯಲ್ಲಿ ಕಾಂಗ್ರೆಸ್ನ ಯು.ಬಿ. ವೆಂಕಟೇಶ್ ಅವರು ವಿಷಯ ಪ್ರಸ್ತಾಪಿಸಿ ‘2022ರಲ್ಲಿ ಪ್ರವಾಹ ಸಂದರ್ಭದ ದುರುಪಯೋಗಪಡೆದುಕೊಂಡು ಪರಿಹಾರ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದ್ದು, ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತದೆಯೇ’ ಎಂದು ಪ್ರಶ್ನಿಸಿದರು.

ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿ, ‘ಪ್ರವಾಹ ಪರಿಹಾರ ಅತ್ಯಂತ ಹೆಚ್ಚಿನ ದುರುಪಯೋಗವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲರೂ ತಲಾ ₹49,999 ಪರಿಹಾರ ಪಡೆದುಕೊಂಡಿದ್ದಾರೆ. ತುಮಕೂರಿನಲ್ಲಿರುವವರು ಚಿಕ್ಕಮಗಳೂರಿನಲ್ಲಿ ಪರಿಹಾರ ಪಡೆದುಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ರೈತರು, ಅಧಿಕಾರಿಗಳು ಎಲ್ಲರೂ ಸೇರಿಕೊಂಡಿದ್ದಾರೆ’ ಎಂದರು.

‘ಪ್ರವಾಹ ಪರಿಹಾರದಲ್ಲಿ ಮಾತ್ರ ದುರುಪಯೋಗವಾಗಿಲ್ಲ; ಜಮೀನು ಮಂಜೂರಾತಿಯಲ್ಲೂ ಅಕ್ರಮ ನಡೆದಿದೆ‘ ಎಂದ ಸಚಿವರು, ‘ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಎಕರೆಯನ್ನು ‘ಬೋಗಸ್ ಗ್ರ್ಯಾಂಟ್’ ಮಾಡಲಾಗಿದೆ. ಈ ಅಕ್ರಮಗಳಲ್ಲಿ ಕಂದಾಯ ಇಲಾಖೆಯ 26 ಅಧಿಕಾರಿಗಳೂ ಸೇರಿಕೊಂಡಿದ್ದಾರೆ. ‘ಬೋಗಸ್ ಗ್ರ್ಯಾಂಟ್’ ಅದೊಂದೇ ಜಿಲ್ಲೆಗೆ ಸೀಮಿತವಲ್ಲ. ಚಿತ್ರದುರ್ಗ, ಹಾವೇರಿ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ‘ಬೋಗಸ್ ಗ್ರ್ಯಾಂಟ್’ ಮಾಡಲಾಗಿದೆ. ಹಾವೇರಿಯ ಪ್ರಕರಣಗಳನ್ನು ಹೇಳಲು ಹೊರಟರೆ ಒಂದು ದಿನ ಸಾಲುವುದಿಲ್ಲ’ ಎಂದರು.

‘ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಮೀನು ಮಂಜೂರಾತಿ ಬಗ್ಗೆ ತನಿಖೆ ಆರಂಭಿಸಲಾಗಿದೆ. ಈ ಬಗ್ಗೆ ಸಮಗ್ರ ವರದಿಯನ್ನು ಪಡೆದು, ಶಿಕ್ಷೆ ಕೊಡಿಸಲೂ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

₹4132 ಕೋಟಿ ಬೆಳೆ ನಷ್ಟ ಪರಿಹಾರ ವಿತರಣೆ

2023ನೇ ಸಾಲಿನಲ್ಲಿ 38.78 ಲಕ್ಷ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ₹4132 ಕೋಟಿ ವಿತರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ವಿಧಾನಪರಿಷತ್ನಲ್ಲಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಪರವಾಗಿ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ‘223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ 48.17 ಲಕ್ಷ ಹೆಕ್ಟೇರ್ನಲ್ಲಿ ಬೆಳೆ ಹಾನಿಯಾಗಿದೆ ಎಂದು ಗುರುತಿಸಲಾಗಿತ್ತು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಲ್ಲಿ ಕೇಂದ್ರ ಸರ್ಕಾರ ₹3266.22 ಕೋಟಿ ಹಾಗೂ ಜೀವನೋಪಾಯ ಪರಿಹಾರಕ್ಕೆ₹232.42 ಕೋಟಿ ಬಿಡುಗಡೆ ಮಾಡಿತ್ತು. ಇದೂ ಸೇರಿದಂತೆ ಒಟ್ಟು ₹4132 ಕೋಟಿಯನ್ನು ಈವರೆಗೆ ರೈತರಿಗೆ ಪಾವತಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.