ಬೆಂಗಳೂರು: ಜೂನ್ ತಿಂಗಳಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ತರಬೇತಿಗಳಿಗೆ ಗೈರು ಹಾಜರಾಗಿದ್ದ ಉಪನ್ಯಾಸಕರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಇಲಾಖೆ ನಿರ್ಧರಿಸಿದೆ.

ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ ಲೆಕ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯಗಳ ಉಪನ್ಯಾಸಕರಿಗೆ ಕಳೆದು ತಿಂಗಳು 7 ದಿನಗಳ ತರಬೇತಿ ನಡೆದಿತ್ತು.

‘ತರಬೇತಿಗೆ ಬಂದವರ ಹಾಜರಾತಿಯನ್ನು ಪ್ರತಿದಿನ ಬಯೋಮೆಟ್ರಿಕ್ನಲ್ಲಿ ಪಡೆಯಲಾಗಿದೆ. ಜಿಲ್ಲಾ ಉಪನಿರ್ದೇಶಕರು, ಗೈರು ಹಾಜರಾದ ಉಪನ್ಯಾಸಕರಿಂದ ಆಯಾ ದಿನವೇ ಕಾರಣ ಕೇಳಿ ನೋಟಿಸ್ ನೀಡಿರುವ ಬಗ್ಗೆ ಇ–ಮೇಲ್ ಮೂಲಕ ನಿರ್ದೇಶಕರಿಗೆಮಾಹಿತಿ ನೀಡಬೇಕು’ ಎಂದು ಸೂಚಿಸಿದೆ.

ದಾಖಲಾತಿ ಅವಧಿ ವಿಸ್ತರಣೆ

2018–19ನೇ ಸಾಲಿನ ಪ್ರಥಮ ಪಿಯು ತರಗತಿಗೆ ದಂಡ ಶುಲ್ಕದೊಂದಿಗೆ (₹2890) ದಾಖಲಾಗಲು ಇದೇ 16ರವರೆಗೆ ಅವಧಿ ವಿಸ್ತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.