ಪುಸ್ತಕದಲ್ಲಿ ಬರೆಯುವೆ

ವಿಧಾನಸಭಾ ಅಧ್ಯಕ್ಷರಕಾರ್ಯ ವೈಖರಿ ಬಗ್ಗೆ ನಾನು ಬರೆಯುವ ಪುಸ್ತಕದಲ್ಲಿ ಉಲ್ಲೇಖಿಸುತ್ತೇನೆ.
ಒತ್ತಡಕ್ಕೆ ಮಣಿದವರಂತೆ ರಮೇಶ್ ಕುಮಾರ್ ವರ್ತಿಸಿದ್ದಾರೆ. ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿ ತಮಗೆ ಸ್ಪೀಕರ್ ಸ್ಥಾನ ನೀಡಿದ್ದಕ್ಕೆ ಋಣ ಸಂದಾಯ ಮಾಡಿದ್ದಾರೆ. ಅವರೇ ಹೇಳಿಕೊಂಡಂತೆ ಕ್ಷಣಕ್ಕೊಮ್ಮೆ ಬದಲಾಗುತ್ತಾರೆ. ನಮ್ಮ ವಿಚಾರದಲ್ಲೂ ಅದೇ ರೀತಿ ನಡೆದುಕೊಂಡಿದ್ದಾರೆ. ಸಭಾಧ್ಯಕ್ಷರಿಂದ ಈ ರೀತಿ ವರ್ತನೆ ನಿರೀಕ್ಷಿಸಿರಲಿಲ್ಲ. ಉತ್ತಮ ಸ್ಪೀಕರ್ ರೀತಿಯಲ್ಲಿ ವರ್ತಿಸಿಲ್ಲ. ಸದನದಲ್ಲಿ ಅವರ ನಡವಳಿಕೆಯೂ ಉತ್ತಮವಾಗಿರಲಿಲ್ಲ. ರಾಜ್ಯದ ಜನರು ಅವರನ್ನು ಕ್ಷಮಿಸುವುದಿಲ್ಲ.

ಎಚ್.ವಿಶ್ವನಾಥ್

ರಾಜಕೀಯ ನಿವೃತ್ತಿ

ಕಾಂಗ್ರೆಸ್ ನಾಯಕರೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣಕರ್ತರು. ಆ ನಾಯಕರೇ ವಿಧಾನಸಭೆಯಲ್ಲಿ ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿರುವಂತೆ ಗೋಸುಂಬೆತನ ತೋರಿದ್ದಾರೆ.ನಮ್ಮನ್ನು ಬೆದರಿಸುವ ರೀತಿಯಲ್ಲಿ ಮಾತನಾಡಿದ್ದು, ಚುನಾವಣೆ ರಣರಂಗದಲ್ಲಿ ಭೇಟಿಯಾಗುವುದಾಗಿ ಹೇಳಿದ್ದಾರೆ. ಅಲ್ಲೇ ಸ್ವಾಗತಿಸುತ್ತೇವೆ. ಸದ್ಯದಲ್ಲೇ ಕ್ಷೇತ್ರದ ಜನರ ಸಭೆ ಕರೆದು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಕೃಷ್ಣ ಬೈರೇಗೌಡ ಅವರೇನೂ ಸಾಚಾ ಅಲ್ಲ. ಜೆಡಿಎಸ್ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ಗೆ ಬಂದಿದ್ದಾರೆ. ಎಚ್.ಡಿ.ದೇವೇಗೌಡ ಮಾತಿನಂತೆ ಲೋಕಸಭೆಯಿಂದ ಸ್ಪರ್ಧಿಸಿ ಸೋತಿದ್ದಾರೆ.

ಎಸ್.ಟಿ.ಸೋಮಶೇಖರ್

ನಿವೃತ್ತಿಗೆ ಚಿಂತನೆ

ನಿವೃತ್ತಿಯ ಚಿಂತನೆ ನಡೆಸಿದ್ದೇನೆ. ನನ್ನ ಮಗ ರಾಜಕೀಯಕ್ಕೆ ಬರುವುದು ಅವನಿಗೆ ಬಿಟ್ಟ ವಿಷಯ. ಯಾವ ಪಕ್ಷ ಸೇರಬೇಕು ಎಂಬುದನ್ನು ಮಗನೇ ತೀರ್ಮಾನ ಮಾಡುತ್ತಾನೆ. ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಹಣದ ಆಸೆಗೆ ಪಕ್ಷಾಂತರ ಮಾಡಿಲ್ಲ. ಪ್ರತಿ ವರ್ಷ ₹20 ಕೋಟಿ ತೆರಿಗೆ ಕಟ್ಟುತ್ತಿದ್ದೇನೆ. ವಸತಿ ಸಚಿವನಾಗಿದ್ದಾಗ ನಿರಾಶ್ರಿತರಿಗೆ 2 ಲಕ್ಷ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಿದರೂ ಅನುಮತಿ ಸಿಗಲಿಲ್ಲ. ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಂದಿಸದೆಹಾರಿಕೆಯ ಉತ್ತರ ನೀಡಿದರು. ಜಿಲ್ಲೆಯ ಕೆಲವು ಅಧಿಕಾರಿಗಳ ವರ್ಗಾವಣೆಗೂ ಸ್ಪಂದಿಸಲಿಲ್ಲ. ಡಿ.ಕೆ.ಶಿವಕುಮಾರ್ ಅವರಿಂದ ನಾನೇನೂ ರಾಜಕೀಯವಾಗಿ ಬೆಳೆದಿಲ್ಲ.

ಎಂ.ಟಿ.ಬಿ.ನಾಗರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.