ಮೈಸೂರು: ‘ಒಂದೂವರೆ ವರ್ಷ ಕಳೆದರೆ, ಚುನಾವಣೆಯಲ್ಲಿ ಸ್ಪರ್ಧಿಸಿ 50 ವರ್ಷ ಪೂರೈಸಿದಂತಾಗುತ್ತದೆ. ಅಲ್ಲಿಗೆ ರಾಜಕೀಯದಿಂದ ನಿವೃತ್ತಿಯಾಗಲಿದ್ದೇನೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.

ಕಲಾಮಂದಿರದಲ್ಲಿ ‘ಸಮಾನತೆ- ಸ್ವಾಭಿಮಾನ- ಸ್ವಾವಲಂಬನೆ ಪ್ರತಿಷ್ಠಾನ’ ಹಾಗೂ ‘ಸಮಾನತೆ ಪ್ರಕಾಶನ’ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ,‘1974ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತೆ. 1977ರಲ್ಲಿ ಜನತಾ ಪಕ್ಷದಿಂದ ಸಂಸತ್ ಪ್ರವೇಶಿಸಿದೆ. ಇದುವರೆಗೆ 14 ಚುನಾವಣೆಯಲ್ಲಿ ಸ್ಪರ್ಧಿಸಿ 11ರಲ್ಲಿ ಗೆಲುವು ಸಾಧಿಸಿದ್ದೇನೆ. 2024ರಲ್ಲಿ ಸಂಸತ್ ಸದಸ್ಯ ಅವಧಿ ಮುಗಿಯಲಿದ್ದು, ಮತ್ತೆ ಸ್ಪರ್ಧಿಸಲಾರೆ’ ಎಂದರು.

‘ದಲಿತ ಸಮುದಾಯ ಇಂದಿಗೂ ಪ್ರತ್ಯೇಕ ಕಾಲೊನಿಗಳಲ್ಲಿ, ಕೊಳೆಗೇರಿಗಳಲ್ಲಿ ವಾಸಿಸುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿಸಿದ್ದೆ.ಅಧಿಕಾರ, ಸಂಪತ್ತು ಅವರಿಗೆ ಇನ್ನೂ ಸರಿಯಾಗಿ ಸಿಕ್ಕಿಲ್ಲ’ ಎಂದರು.

‘22 ವರ್ಷಗಳಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮೊಸಳೆ ಹಿಡಿದು ಕೊಂಡಿತ್ತು. ಚುನಾವಣೆಯಿಂದ ಪಕ್ಷಕ್ಕೆ ಗಜೇಂದ್ರ ಮೋಕ್ಷ ಸಿಕ್ಕಿದೆ.ಆನೆ ನೀರು ಕುಡಿಯಲು ಹೊಳೆ ಹತ್ತಿರ ಹೋದಾಗ ಮೊಸಳೆ ಕಾಲು ಹಿಡಿದುಕೊಳ್ಳುತ್ತದೆ. ಇದೀಗ ಬಿಟ್ಟಿರುವುದರಿಂದ ಇಬ್ಬರು ಅಭ್ಯರ್ಥಿಗಳ ನಡುವೆ ಚುನಾವಣೆ ನಡೆಯುತ್ತಿದೆ. ಗೆದ್ದವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೋ ಇಲ್ಲವೋ ನನಗೆ ಸಂಬಂಧವಿಲ್ಲ’ಎಂದು ಪ್ರಸಾದ್‌ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.