ಬೆಂಗಳೂರು: ಎತ್ತಿನಹೊಳೆ ಯೋಜನೆಯ ಲಿಫ್ಟ್ ಕಾಮಗಾರಿ ಪೂರ್ಣಗೊಂಡಿದ್ದು, ಇದೇ ತಿಂಗಳು ವಿಯರ್ಗಳಿಂದ ನೀರನ್ನೆತ್ತಿ ಗುರುತ್ವ ಕಾಲುವೆಗಳ ಮೂಲಕ ಪ್ರಾಯೋಗಿಕವಾಗಿ ಹರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಮಂಗಳವಾರ ಬಿಜೆಪಿಯ ಬಿ.ಸುರೇಶ್ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿಧಾನಮಂಡಲ ಅಧಿವೇಶನ ಮುಗಿದ ತಕ್ಷಣವೇ ಒಂದು ಒಳ್ಳೆಯ ಮುಹೂರ್ತ ನೋಡಿ ಚಾಲನೆ ನೀಡುತ್ತೇವೆ. ನೀರನ್ನು ಗುರುತ್ವ ಕಾಲುವೆಯ ಸರಪಳಿ 42ರವರೆಗೆ ಹರಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

ಇತ್ತೀಚೆಗೆ ಸಕಲೇಶಪುರದ ಬಳಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಪ್ರಯತ್ನ ನಡೆಸಿದಾಗ ಪೈಪ್ ಸಿಡಿದು ಸಮೀಪದ ತೋಟಕ್ಕೆ ನೀರು ನುಗ್ಗಿತ್ತು. ಅದರ ರಿಪೇರಿ ಕೆಲಸ ಮುಗಿದಿದೆ. ಈಗ ನೀರು ಕೂಡ ಸಂಗ್ರಹವಾಗಿದೆ ಎಂದು ಶಿವಕುಮಾರ್ ಹೇಳಿದರು.

ನವೆಂಬರ್ ಅಂತ್ಯಕ್ಕೆ ಗುರುತ್ವ ಕಾಲುವೆ ಸರಪಳಿ 42 ಕಿ.ಮೀನಿಂದ 231 ಕಿ.ಮೀ ತುಮಕೂರುವರೆಗೆ (ಮಧುಗಿರಿ– ಪಾವಗಡ ಫೀಡರ್ ಒಳಗೊಂಡಂತೆ) ನಾಲೆಗೆ ಹರಿಸಲಾಗುವುದು ಎಂದು ಸಚಿವರು ಉತ್ತರ ನೀಡಿದ್ದಾರೆ. ಆದರೆ, ಈವರೆಗೆ ಒಂದು ಹನಿ ನೀರು ಕೂಡ ಬಿಟ್ಟಿಲ್ಲ. ಯೋಜನೆಯ ಪರಿಷ್ಕೃತ ಅಂದಾಜು ₹23,000 ಕೋಟಿಗೆ ಏರಿದೆ ಎಂದು ಬಿ.ಸುರೇಶ್ ಗೌಡ ಹೇಳಿದರು.

ಹೆಸರಘಟ್ಟ ಕೆರೆಗೆ 0.50 ಟಿಎಂಸಿ ಅಡಿ ನೀರು:

ಎತ್ತಿನಹೊಳೆ ಯೋಜನೆಯಿಂದ ಬೆಂಗಳೂರಿನ ಹೆಸರಘಟ್ಟ ಕೆರೆಗೆ 0.50 ಟಿಎಂಸಿ ಅಡಿ ನೀರನ್ನು ಹರಿಸಲಾಗುವುದು. ಇದಕ್ಕಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಡೇಶ್ವರ ಗ್ರಾಮದ ಸಮೀಪ ವಿತರಣಾ ತೊಟ್ಟಿ ನಿರ್ಮಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಈ ಕುರಿತ ಪ್ರಶ್ನೆ ಕೇಳಿದ ಬಿಜೆಪಿಯ ಎಸ್.ಆರ್.ವಿಶ್ವನಾಥ್, ಎತ್ತಿನ ಹೊಳೆಯ ಈಗಿನ ಸ್ಥಿತಿಗತಿ ನೋಡಿದರೆ ಹೆಸರಘಟ್ಟ ಕೆರೆಗೆ ನೀರು ಬರುವ ಸಾಧ್ಯತೆಯೇ ಇಲ್ಲ ಎಂದರು.

‘ಎತ್ತಿನ ಹೊಳೆ ಯೋಜನೆ ಯಾರದ್ದೋ ಹೊಟ್ಟೆ ತುಂಬಿಸಲು ಮಾಡಿದ ಯೋಜನೆಯಾಗಿದೆ. ಇಲ್ಲಿ ನೀರು ಸಿಗುವುದೇ ಕಷ್ಟ ಎಂಬ ಮಾತಿದೆ. ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎನ್ನುವ ಅಭಿಪ್ರಾಯ ಸರಿಯಲ್ಲ. ನದಿ ನೀರು ಸಮುದ್ರ ಸೇರುವುದರಿಂದ ಅಪಾರ ಪ್ರಮಾಣದ ಜಲಚರಗಳಿಗೆ ಅನುಕೂಲವಾಗುತ್ತದೆ’ ಎಂದು ಬಿಜೆಪಿಯ ಸುನಿಲ್ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.