ಸಿದ್ದಾಪುರ: ಕೋಲ್ಕತ್ತದ ‘ಅಪನೀ ಭಾಷಾ’ ಸಂಸ್ಥೆಯ ‘ಜಸ್ಟಿಸ್ ಶಾರದಾ ಚರಣ್ ಮಿತ್ರ ಸ್ಮೃತಿ ಭಾಷಾ ಸೇತು ಸಮ್ಮಾನ್’ ಪ್ರಶಸ್ತಿಗೆ ಸ್ಥಳೀಯ ಲೇಖಕ ಡಾ.ಆರ್.ಪಿ. ಹೆಗಡೆ ಪಾತ್ರರಾಗಿದ್ದಾರೆ.

ಹಿಂದಿಯೇತರ ಭಾಷಿಕರು ಹಿಂದಿ ಭಾಷೆಯ ಸಾಹಿತ್ಯಕ್ಕೆ ನೀಡುವ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಆರ್.ಪಿ. ಹೆಗಡೆ ಅವರು ಹಿಂದಿಯಿಂದ ಕನ್ನಡಕ್ಕೆ 60ಕ್ಕೂ ಹೆಚ್ಚು ಕೃತಿಗಳನ್ನು ಅನುವಾದ ಮಾಡಿದ್ದಾರೆ.

ಜೀವಮಾನದ ಸಾಧನೆ ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಆರ್.ಪಿ.ಹೆಗಡೆ ಕನ್ನಡದಲ್ಲಿ 18ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಮಲಾ ಗೋಯಂಕಾ ಟ್ರಸ್ಟ್, ಕುವೆಂಪು ಭಾಷಾ ಭಾರತಿ, ದೆಹಲಿಯ ಭಾರತೀಯ ಅನುವಾದ ಪರಿಷತ್ತಿನ ಪುರಸ್ಕಾರ ಕೂಡ ಲಭ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.