ಲಾಸ್ ಏಂಜೆಲಿಸ್:ಇರ್ಫಾನ್ ಖಾನ್ ಅವರು ಉದಾರ ಮನೋಭಾವ ಹೊಂದಿದ್ದ, ಅದ್ಭುತ ನಟ ಎಂದು ಹೇಳುವ ಮೂಲಕ ಖ್ಯಾತ ಹಾಲಿವುಡ್ ನಟಿ ಏಂಜೆಲಿನಾ ಜೋಲಿ 'ಎ ಮೈಟಿ ಹಾರ್ಟ್' ಸಿನೆಮಾದ ತಮ್ಮ ಸಹ ನಟನನ್ನು ನೆನಪಿಸಿಕೊಂಡಿದ್ದಾರೆ.

ಬುಧವಾರ ಕ್ಯಾನ್ಸರ್ನಿಂದ ನಿಧನರಾದ ಇರ್ಫಾನ್ ಖಾನ್ ಅವರು ಏಂಜೆಲಿನಾ ಜೋಲಿ ಅವರೊಂದಿಗೆ 'ಎ ಮೈಟಿ ಹಾರ್ಟ್' ಚಿತ್ರದಲ್ಲಿ ನಟಿಸಿದ್ದರು.

2007ರಲ್ಲಿ ಬಿಡುಗಡೆಯಾಗಿದ್ದ ಮೈಕಲ್ ವಿಂಟರ್ಬಾಟಮ್ ಅವರ ನಿರ್ದೇಶನದ 'ಎ ಮೈಟಿ ಹಾರ್ಟ್' ಚಿತ್ರವು 2002ರಲ್ಲಿ ಪಾಕಿಸ್ತಾನದಲ್ಲಿ ಹತ್ಯೆಯಾಗಿದ್ದ ಅಮೆರಿಕ ಪತ್ರಕರ್ತ ಡೇನಿಯಲ್ ಪರ್ಲ್ ಅವರ ಜೀವನಗಾಥೆಯನ್ನು ಹೊಂದಿದೆ.

ಈ ಚಿತ್ರದಲ್ಲಿ ಏಂಜೆಲಿನಾ ಜೋಲಿ ಪತ್ರಕರ್ತ ಪರ್ಲ್ ಅವರ ಪತ್ನಿಯಾಗಿ ಕಾಣಿಸಿಕೊಂಡರೆ, ಇರ್ಫಾನ್ ಖಾನ್ ಅವರು ಪಾಕಿಸ್ತಾನದ ಕರಾಚಿ ಮಹಾನಗರ ಪೊಲೀಸ್ ಮುಖ್ಯಸ್ಥನಾಗಿ ನಟಿಸಿದ್ದರು.

ಇರ್ಫಾನ್ ಖಾನ್ ಅವರಿಗೆ ನಟನೆಯಲ್ಲಿದ್ದ ಬದ್ಧತೆಯನ್ನು ಸ್ಮರಿಸಿರುವ ಏಂಜೆಲಿನಾ ಜೋಲಿ, ಇರ್ಫಾನ್ ಅವರು ಉದಾರ ಮನೋಭಾವ ಹೊಂದಿದ್ದ ಅದ್ಭುತ ನಟ ಎಂದು ಹೇಳಿದ್ದಾರೆ.

'ಎ ಮೈಟಿ ಹಾರ್ಟ್ ಚಿತ್ರದಲ್ಲಿ ಇರ್ಫಾನ್ ಖಾನ್ ಅವರೊಂದಿಗೆ ನಟಿಸುವ ಅವಕಾಶ ದೊರೆಯಿತು. ನಟರಾಗಿ ಅವರ ಉದಾರ ಮನೋಭಾವ ದೊಡ್ಡದು. ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಸಂತಸ ತಂದಿತ್ತು' ಎಂದು ಏಂಜೆಲಿನಾ ತಿಳಿಸಿದ್ದಾರೆ.

ಇರ್ಫಾನ್ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಾಂತ್ವನ ಹೇಳುವ ಮೂಲಕ ಏಂಜೆಲಿನಾ ಜೋಲಿ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.